ಮಂಜುಳಗಿರಿ ಈಶ್ವರ ಭಟ್ ರಿಗೆ ಸನ್ಮಾನ

Advt_Headding_Middle
Advt_Headding_Middle

ಪಂಜದ  ಬಳ್ಳಕದಲ್ಲಿರುವ, ಈಶ್ವರ ಭಟ್ ಮಂಜುಳಗಿರಿ, ಅವರನ್ನು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗಿರಿ ನಗರದಲ್ಲಿ ಗೋಸ್ವರ್ಗ ಚಾತುರ್ಮಾಸ್ಯದ ಸೀಮೋಲ್ಲಂಘನದ ಸಭಾ ವೇದಿಕೆಯಲ್ಲಿ ಶಾಲು ಹೊದಿಸಿ ಅನುಗ್ರಹ ಪತ್ರವನ್ನು ನೀಡಿ ಸಮ್ಮಾನಿಸಿದರು.
ಕಳೆದ ೨೪ ಚಾತುರ್ಮಾಸ್ಯದಲ್ಲೂ ಭಾಗವಹಿಸಿರುವ ಮಂಜುಳಗಿರಿಯವರು ಶ್ರೀ ಮಠದ ಪಂಜ ವಲಯದ ಗುರಿಕ್ಕಾರರಾಗಿ 22 ವರ್ಷ ಸೇವೆ ಸಲ್ಲಿಸಿದ್ದಾರೆ. ಸುಮಾರು ೪೦ ವರ್ಷಗಳ ಕಾಲ ಕೂತ್ಕುಂಜ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ೮೬ರ ಈ ವಯಸ್ಸಿನಲ್ಲೂ ಗುರುಸೇವೆಯಲ್ಲಿ ನಿರತರಾಗಿದ್ದಾರೆ. ಇವರನ್ನು ಪಂಜ, ಗುತ್ತಿಗಾರು ವಲಯದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.