ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Advt_Headding_Middle
Advt_Headding_Middle

ಕೆವಿಜಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪಧಗ್ರಹಣ ಹಾಗೂ ಸಂಘದ ಉದ್ಘಾಟನೆ ಸಮಾರಂಭ ಕಾನೂನು ಕಾಲೇಜ್ ಸಭಾಂಗಣದಲ್ಲಿ ಸೆ.೨೦ರಂದು ನಡೆಯಿತು.


ಕರ್ನಾಟಕ ರಾಜ್ಯ ಕಾನೂನು ವಿದ್ಯಾಲಯ ಹುಬ್ಬಳ್ಳಿ ಇದರ ವೈಸ್ ಚಾನ್ಸೆಲರ್ ಡಾ:ಈಶ್ವರ ಭಟ್ ಸಮಾರಂಭ ವನ್ನು ಉದ್ಘಾಟಿಸಿದರು ,ಕಾನೂನು ವಿದ್ಯಾಲಯ ಸ್ಥಾಪಕ ಪ್ರಾಚಾರ್ಯರಾದ ಪಡ್ಡಂಬೈಲ್ ವೆಂಕಟರಮಣ ಗೌಡ, ಕೆವಿಜಿ ಮೆಡಿಕಲ್ ಕಾಲೇಜ್ ಆಡಳಿತಾಧಿಕಾರಿ ಜಗದೀಶ್ ಅಡ್ತಲೆ,ಹಣಕಾಸು ವ್ಯವಸ್ಥಾಪಕ ಧನಂಜಯ ಮದುವೆಗದ್ದೆ,ಕಾಲೇಜು ಪ್ರಾಚಾರ್ಯ ಉದಯ ಕೃಷ್ಣ,ಜವರೇ ಗೌಡ, ವಿದ್ಯಾರ್ಥಿ ವೇಲ್ಪರ್ ಅಧಿಕಾರಿ ಟೀನಾ ಹೆಚ್ ಎಸ್,ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಾಯಕ ಶ್ಯಾಮ್ ಪ್ರಸಾದ್, ಉಪನಾಯಕಿ ಅರ್ಪಿತಾ,ಕಾರ್ಯದರ್ಶಿ ನಿಕಿಲ್,ಜೊತೆ ಕಾರ್ಯದರ್ಶಿ ಸುವಿನಾ, ಹಾಗೂ ಇತರ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಟೀನಾ ಹೆಚ್. ಎಸ್. ಪ್ರಮಾಣ ವಚನ ಬೋಧಿಸಿದರು. ಪ್ರಾಂಶುಪಾಲ ಉದಯ ಕೃಷ್ಣ ಸ್ವಾಗತಿಸಿದರು ಕಾನೂನು ಕಾಲೇಜು ಪ್ರಾಧ್ಯಾಪಕ ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.