Breaking News

ಈ ವರ್ಷ ಸಂಪಾಜೆಯಲ್ಲಿ ಯಕ್ಷೋತ್ಸವ ಇಲ್ಲ

Advt_Headding_Middle
Advt_Headding_Middle

ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ) ಸಂಪಾಜೆ ದ.ಕ ಇತ್ತೀಚೆಗೆ ದಕ್ಷಿಣ ಕನ್ನಡದ ಗಡಿಭಾಗಗಳಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ವಿಕೋಪದಿಂದ ಕಲ್ಲುಗುಂಡಿ ಶಾಲೆಯಲ್ಲಿ ಸಂತ್ರಸ್ತರು ಆಶ್ರಯ ಪಡೆಯುತ್ತಿದ್ದಾರೆ.

ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಜನತೆಯ ಕಷ್ಟಗಳಿಗೆ ಸ್ಪಂದಿಸುತ್ತಾ ಅವರ ಸಂಕಷ್ಟದ ಸಮಯದಲ್ಲಿ , ಸಂಪಾಜೆ ಪ್ರದೇಶದಲ್ಲಿ ಸಂಭ್ರಮಾಚರಣೆಗಳು ಸೂಕ್ತವಲ್ಲವೆಂದು ಪ್ರತಿಷ್ಠಾನವು ನಿರ್ಧರಿಸಿರುವುದರಿಂದ ಪ್ರತಿವರ್ಷ ಅಕ್ಟೋಬರ್/ನವೆಂಬರ್ ನಲ್ಲಿ ನಡೆಯುತ್ತಿದ್ದ ‘ಸಂಪಾಜೆ ಯಕ್ಷೋತ್ಸವ’ ವನ್ನು ರದ್ದುಗೊಳಿಸಲಾಗಿದೆ. ಆದರೆ ಪ್ರತಿಷ್ಠಾನದ ವತಿಯಿಂದ ನಡೆಯುವ ಡಾ. ಕೀಲಾರು ಗೋಪಾಲಕೃಷ್ಣಯ್ಯ ಸಂಸ್ಮರಣಾ ಕಾರ್ಯಕ್ರಮವು ಅ.27 ರಂದು ಪೂರ್ವಾಹ್ನ 10 ಗಂಟೆಯಿಂದ 28  ಬೆಳಿಗ್ಗೆ 9 ಗಂಟೆವರೆಗೆ ಯಕ್ಷಗಾನ ಬಯಲಾಟದೊಂದಿಗೆ ಅಡ್ಯಾರ್ ಗಾರ್ಡನ್ ಅಡ್ಯಾರ್ ಮಂಗಳೂರಿನಲ್ಲಿ ನಡೆಯಲಿದೆ. ದ್ರೌಪದಿ ಪ್ರತಾಪ , ಏಕಾದಶಿ ಮಹಾತ್ಮೆ ,ರಾಜಾ ಸೌದಾಸ , ಮಾಯಾ ವಿಹಾರಿ ಪ್ರಸಂಗಗಳು ನಡೆಯಲಿವೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.