ಅ. 9-19: ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ – ಆಮಂತ್ರಣ ಬಿಡುಗಡೆ

Advt_Headding_Middle
Advt_Headding_Middle

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.9 ರಿಂದ ಪ್ರಾರಂಭಗೊಂಡು 19 ರವರೆಗೆ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ-ಸಭೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ಮತ್ತು ಮಹಾಸಂಪ್ರೋಕ್ಷಣೆ ನಡೆಯಲಿರುವುದು.

 

ಆ ಪ್ರಯುಕ್ತ ಸೆ.೨೮ ರಂದು ಅರ್ಚಕ ಚಿದಾನಂದ ಉಪಧ್ಯಾಯ ಕಲ್ಪಡ್ಕರವರ ವೈದಿಕ ಕಾರ್ಯಕ್ರಮಗಳೊಂದಿಗೆ ಬಿಡುಗಡೆಗೊಂಡಿತು.

 

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಆಧ್ಯಕ್ಷ ಅಕ್ಷಯ ಆಳ್ವ ಪಿ.ಡಿ, ಸದಸ್ಯರುಗಳಾದ ಗಂಗಾಧರ ಪೊಳೆಂಜ, ಶಿವಾನಂದ ನಾಗಮಜಲು, ಪದ್ಮನಾಭ ರೈ ಎಂಜಿರು, ರಘುನಾಥ ರೈ ಕಟ್ಟೆಬೀಡು, ರಮಾನಂದ ರೈ ಪೂಳೆಂಜ,ಸುಧೀರ್‌ಕುಮಾರ್ ಶೆಟ್ಟಿ ಕೆ., ಬಾಳಕೃಷ್ಣ ರೈ ಪಾರ್ಲ, ಜನಾರ್ದನ ಅಲೆಕ್ಕಾಡಿ, ಬಾಲಕೃಷ್ಣ ಪೂಜಾರಿ, ಕೃಷ್ಣಪ್ಪ ಗೌಡ ಪೂದೆ, ಆನಂದ ಗೌಡ ಮಾನ್ಯಡ್ಕಕ ಅವಿನಾಶ್ ದೇವರಮಜಲು, ಸೀತಾರಾಮ ರೈ ಊರುಸಾಗು, ತಿಮ್ಮಪ್ಪ ಗೌಡ ಕಾಮಧೇನು, ಸುಧಾಕರ ಕರಿಂಬಿಲ, ಮೊದಲಾದವರು ಉಪಸ್ಥಿತರಿದ್ದರು.


ಒ ೯ ರಂದು ಬೆಳಿಗ್ಗೆ ರಿಂದ ಅಮ್ಮ ನೆಡೆ – ನಮ್ಮ ನಡೆ ಕಾರ್ಯಕ್ರಮ, ಸಂಜೆ ನವರಾತ್ರಿ ಪೂಜಾರಂಭ, ಬೆಳಿಗ್ಗೆ ಪೂಜಾ ವಿಧಿ ವಿಧಾನಗಳು, ಮಹಾಪೂಜೆ, ಅನ್ನಸಂತರ್ಪಣೆ , ಸೇವಾರಂಗ ಪೂಜೆ, ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮ ಜಬ್ಬಾರ್‌ ಸುಮೋ ಬಳಗದವರಿಂದ ಕರ್ಣಪರ್ಲ ಯಕ್ಷಗಾನ ತಾಳಮದ್ದಳೆ,  ೧೦ ರಂದು ಅಲೆಕ್ಕಾಡಿ ಅಂಗನವಾಡಿ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ , ೧೧ ರಂದು ತುಳು ಚಾರಿತ್ರಿಕ ನಾಟಕ ಕೋಟಿ ಚೆನ್ನಯ್ಯ, ೧೨ರಂದು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳ ಮತ್ತು ಅತಿಥಿ ಕಲಾವಿದರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ, ೧೩ ರಂದು ಕಣ್ವಶ್ರೀ ಕಲಾವಿದ ಕಾಣಿಯೂರು ನೃತ್ಯ ರೂಪಕ ನವಶಕ್ತಿ ವೈಭವ, ೧೪ ರಂದು ಎಡಮಂಗಲ ಲಕ್ಷ್ಮಣ ಆಚಾರ್ಯರವರ ನೇತೃವ್ವದಲ್ಲಿ ಮಹಿಷ ಮರ್ಧಿನಿ ಯಕ್ಷಗಾನ ಬಯಲಾಟ, ೧೮ ರಂದು ಪುತ್ತೂರು ಶಕಜ್ತಿ ಮಹಿಳಾ ಯಕ್ಷ ಬಳಗದಿಂದ ಕದಂಬ ಕೌಶಿಕೆ, ೧೬ ರಂದು ಕಲಾಮಾಯೆ ನೃತ್ಯ ತರಬೇತಿ ಕೇಂದ್ರ ಎಣ್ಮೂರು ಇವರಿಂದ ಭಕ್ತಿ ರಸಮಂಜರಿ ನೃತ್ಯೋತ್ಸವ, ೧೭ರಂದು ಬಲಿಪೆ ಚಲನ ಚಿತ್ರ ತಂಡದಿಂದ ವಿಶೇಷ ಕಾರ್ಯಕ್ರಮ, ೧೮ರಂದು ಮಂಗಳೂರು ಪ್ರಖ್ಯಾತ ಹುಲಿವೇಷ ತಂಡದಿಂದ ಹುಲಿ-ತಾಲೀಮು, ಅದೇ ದಿನ ಬೆಳಿಗ್ಗೆ ಆಯುಧ ಪೂಜೆ, ೧೯ ರಂದು ಬೆಳಿಗ್ಗೆ ಗಣಹೋಮ, ಸೀಯಾಳಭಿಷೇಕ, ಅಕ್ಷರಾಭ್ಯಾಸ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಾ ಸಂಪ್ರೋಕ್ಷಣೆ ಮತ್ತು ಅನ್ನಸಂತರ್ಪಣೆ ನಡೆಯಲಿರುವುದು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಆರ್. ವೇದವ್ಯಾಸ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಕ್ಷಯ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರಾಜೀವಿ.ಆರ್. ರೈ ಪುಡ್ಕಜೆ, ಮತ್ತು ಡಾ| ಅವಿನ್ ಡಿ.ಪಿ ದೋಣಿಮನೆ ಎಂ.ಬಿ.ಎಸ್.ಎಸ್ ರವರನ್ನು ದೇವಳದ ವತಿಯಿಂದ ಸನ್ಮಾನ ನಡೆಯಲಿದೆ. ನವೋದಯ ಚಾರಿಟೇಬಲ್ ಟ್ರಸ್ಟ್‌ನ ಪ್ರಧಾನ ವ್ಯವಸ್ಥಾಪಕರು ಶ್ರೀಮತಿ ಪೂರ್ಣಿಮಾ.ಆರ್. ಮತ್ತು ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ಮಿಲ್ಕ್ ಮಾಸ್ಟರ್ ರಾಘವ ಗೌಡ ಮುಖ್ಯ ಆಥಿತಿಗಳಾಗಿರುವರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.