Breaking News

ಅ.೧೫ ರಂದು ಸುಳ್ಯದಲ್ಲಿ ಭಜಕರ ಸಂಘಟನೆಗಾಗಿ ಭಜನಾ ಮೆರವಣಿಗೆ- ಭಜನೋತ್ಸವ

Advt_Headding_Middle
Advt_Headding_Middle

ಸುಳ್ಯ ತಾಲೂಕು ಭಜನಾ ಪರಿಷತ್,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಮತ್ತು ತಾಲೂಕಿನ ಸಮಸ್ತ ಭಜನಾ ಮಂಡಳಿಗಳ ಸಹಯೋಗದಲ್ಲಿ ಭಜಕರ ಸಂಘಟನೆಗಾಗಿ ಭಜನೋತ್ಸವವು ಅ.೧೫ ರಂದು ನಡೆಯಲಿರುವುದು.
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ ಉತ್ಸವವು ನಡೆಯಲಿದೆ. ಪೂರ್ವಾಹ್ನ ೮.೩೦ ರಿಂದ ಶ್ರೀರಾಂಪೇಟೆಯ ಶ್ರೀ ರಾಮ ಭಜನಾ ಮಂದಿರದ ಬಳಿಯಿಂದ ಭಜಕರ ಭಜನಾ ಮೆರವಣಿಗೆಯು ಸಾಗಲಿದೆ. ಬಳಿಕ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭವು ನಡೆಯಲಿದೆ. ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಆಶಿರ್ವಚನ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕ, ಶ್ರೀ ಕ್ಷೇ. ಧ.ಗ್ರಾ.ಯೋ.ಪ್ರಾ.ನಿರ್ದೇಶಕ ಮಹಾವೀರ ಅಜ್ರಿ, ಶ್ರೀ ಶಾ.ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ ಕೇಕಡ್ಕ, ತಾ.ಭ.ಪರಿಷತ್ ಗೌರವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ ಉಪಸ್ಥಿತರಿರುತ್ತಾರೆ. ಬಳಿಕ ಭಜಕರಿಂದ ಸಾಮೂಹಿಕ ಕುಣಿತ ಭಜನೆ, ಅಪರಾಹ್ನ ದಾಸ ಸಾಹಿತ್ಯ ಸಂಕೀರ್ತನ ಕಾರ ರಾಮಕೃಷ್ಣ ಕಾಟುಕುಕ್ಕೆ ಯವರಿಂದ ಭಜನಾ ತರಬೇತಿ ಮತ್ತು ಉಪನ್ಯಾಸ ನಡೆಯಲಿರುವುದು.ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಭಜನಾ ಮಂಡಳಿಗಳಿಗೆ ದೃಢಪತ್ರ ವಿತರಣೆಯಾಗಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು.ಭಜನೋತ್ಸವದಲ್ಲಿ ಮಹಿಳಾ ಭಜನಾ ಮಂಡಳಿಯವರು ಮತ್ತು ಮಕ್ಕಳ ಭಜನಾ ತಂಡಗಳು ಭಾಗವಹಿಸಲು ಅವಕಾಶವಿರುವುದಾಗಿ ಸಂಘಟಕರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.