ಜಾಲ್ಸೂರು: ಬಿಜೆಪಿ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ

Advt_Headding_Middle
Advt_Headding_Middle

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಗ್ರಾಮ ವಿಕಾಸ ಸಮಿತಿಗಳ ಒಕ್ಕೂಟ ಸುಳ್ಯ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸಂಪಾಜೆಯಿಂದ ಕನಕಮಜಲುವರೆಗೆ ಮುಖ್ಯ ರಸ್ತೆಯುದ್ದಕ್ಕೂ ಆರು ಕೇಂದ್ರಗಳಲ್ಲಿ ನಡೆಯುವ ಬೃಹತ್ ಕಾರ್ಯಕ್ರಮ ವು ಜಾಲ್ಸೂರಿನಲ್ಲಿ ಸೆ.೩೦ರಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.

ಜಾಲ್ಸೂರು ಮುಖ್ಯ ಪೇಟೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಸುಳ್ಯದ ಮಕ್ಕಳ ತಜ್ಞರಾಗಿರುವ ಡಾ.ಶ್ರೀಕೃಷ್ಣ ಭಟ್ ಅವರು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿಜೆಪಿ ಪ್ರ.ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಜಾಲ್ಸೂರು ಶಕ್ತಿಕೇಂದ್ರದ ಅಧ್ಯಕ್ಷ ಉದಯಕುಮಾರ್ ಆಚಾರ್, ಬಿಜೆಪಿ ನಾಯಕರುಗಳಾದ ಜಯರಾಮ ರೈ ಜಾಲ್ಸೂರು, ನಾರಾಯಣ ಗೌಡ ಕದಿಕಡ್ಕ, ಜಾಲ್ಸೂರು ಗ್ರಾ.ಪಂ. ಸದಸ್ಯರುಗಳಾದ ಜನಾರ್ದನ ಆಚಾರ್ಯ, ಭುವನೇಂದ್ರ ಬೊಳುಬೈಲು ಕನಕಮಜಲು ಪ್ರಾ.ಕೃ.ಸಂಘದ ಅಧ್ಯಕ್ಷ ಸತೀಶ್ ಎನ್.ಎಂ. ಕೆಮನಬಳ್ಳಿ, ನಿರ್ದೇಶಕ ಜಯಪ್ರಕಾಶ್ ಬೈತಡ್ಕ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಪನ್ನೆ, ಡಿ.ಸಿ.ಬಾಲಚಂದ್ರ ದೇವರಗುಂಡ, ಅಶೋಕ ಅಡ್ಕಾರು, ಕೆ.ಎಂ.ಬಾಬು, ತೀರ್ಥರಾಮ ಬಾಳೆಕೋಡಿ, ದಾಮೋದರ ಪದವು, ಜಾಲ್ಸೂರು ಗ್ರಾ.ಪಂ.ಉಪಾಧ್ಯಕ್ಷ ದಿನೇಶ್ ಅಡ್ಕಾರು ಸೇರಿದಂತೆ ಜಾಲ್ಸೂರಿನ ರಿಕ್ಷಾ ಚಾಲಕರುಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.