ಜಾಲ್ಸೂರು (ಅಡ್ಕಾರು) ಶಾಲಾ ರಂಗಮಂದಿರಕ್ಕೆ ಶಾಸಕರಿಂದ ಶಂಕುಸ್ಥಾಪನೆ

Advt_Headding_Middle
Advt_Headding_Middle

ಜಾಲ್ಸೂರು (ಅಡ್ಕಾರು) ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು 2018ರ ಡಿಸೆಂಬರ್ ತಿಂಗಳಲ್ಲಿ ಶಾಲಾ ಶತಮಾನೋತ್ಸವ ಆಚರಿಸಲಿದ್ದು ಶಾಸಕರ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಶಾಲಾ ನೂತನ ರಂಗಮಂದಿರಕ್ಕೆ ಶಾಸಕ ಎಸ್.ಅಂಗಾರ ಅವರು ಸೆ.30ರಂದು ಶಂಕುಸ್ಥಾಪನೆ ನೆರವೇರಿಸಿದರು.

ಶಾಸಕರ ಅನುದಾನದಲ್ಲಿ ರೂ. ಎರಡು ಲಕ್ಷ ಅನುದಾನ, ಭಾರತೀಯ ಜೀವವಿಮಾ ನಿಗಮದ ವತಿಯಿಂದ ಮಾಧವ ಜಾಲ್ಸೂರು ಅವರಿಂದ ಒಂದು ಲಕ್ಷ ಅನುದಾನ ಹಾಗೂ ಶಾಲಾ ಕ್ರೀಡಾಂಗಣ ವಿಸ್ತರಣೆಗೆ ತಾಲೂಕು ಪಂಚಾಯತ್ ವತಿಯಿಂದ 75 ಸಾವಿರ ಅನುದಾನ ದೊರೆತಿದ್ದು ಶಾಲಾ ಕ್ರೀಡಾಂಗಣ ವಿಸ್ತರಣೆಯಾಗಿದೆ.
ಶಾಸಕ ಅಂಗಾರರು ಮಾತನಾಡಿ ಶಾಲೆಯ ಸ್ವಾದೀನದಲ್ಲಿ ಇರುವ ಜಾಗವನ್ನು ಶಾಲೆಯ ಹೆಸರಿಗೆ ಬರುವಂತೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಮಾಡಿಕೊಡುತ್ತೇನೆ ಹಾಗೂ ಹೆಚ್ಚುವರಿ ಅನುದಾನವನ್ನು ಒದಗಿಸಿಕೊಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಾಲಾ ಸಹಶಿಕ್ಷಕರು ಹಾಗೂ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.