ಕನಕಮಜಲು: ಬಿಜೆಪಿ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ

Advt_Headding_Middle
Advt_Headding_Middle

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಗ್ರಾಮವಿಕಾಸ ಸಮಿತಿಗಳ ಒಕ್ಕೂಟ ಸುಳ್ಯ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸಂಪಾಜೆಯಿಂದ ಕನಕಮಜಲುವರೆಗೆ ಮುಖ್ಯ ರಸ್ತೆಯುದ್ದಕ್ಕೂ ಆರು ಕೇಂದ್ರಗಳಲ್ಲಿ ನಡೆಯುವ ಬೃಹತ್ ಸ್ವಚ್ಛತಾ ಕಾರ್ಯಕ್ರಮವು ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ವಠಾರದಲ್ಲಿ ಸೆ.30ರಂದು ಉದ್ಘಾಟನೆಗೊಂಡಿತು.

ನಿವೃತ್ತ ಯೋಧ(ಸುಬೇದಾರ್) ರಘುಪತಿ ಯು.ಯಂ. ಮಂಡೆಕೋಲು ಅವರು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ, ಎ.ಪಿ.ಎಂ.ಸಿ.ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಕನಕಮಜಲು ಗ್ರಾ.ಪಂ.ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಸೊಸೈಟಿ ನಿರ್ದೇಶಕರುಗಳಾದ ವಸಂತ ಮಳಿ, ದಿವಾಕರ ಕಾಳಪ್ಪಜ್ಜನಮನೆ, ಹರೀಶ್ ಮೂರ್ಜೆ, ಈಶ್ವರ ಕೊರಂಬಡ್ಕ, ತಾ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಡಿ.ಸಿ.ಬಾಲಚಂದ್ರ ದೇವರಗುಂಡ, ಹೇಮಂತ್ ಮಠ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.