HomePage_Banner
HomePage_Banner
HomePage_Banner
HomePage_Banner

ದಿ ಅಕೌಂಟೆಂಟ್ ಜನರಲ್ಸ್ ಆಫೀಸ್ ಎಂಪ್ಲಾಯೀಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್. ಬೆಂಗಳೂರಿನಿಂದ ವಿವಿಧ ಹುದ್ದೆಗಳು

 


ದಿ ಅಕೌಂಟೆಂಟ್ ಜನರಲ್ಸ್ ಆಫೀಸ್ ಎಂಪ್ಲಾಯೀಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್. ಬೆಂಗಳೂರು ಇಲ್ಲಿ ಅರ್ಹ ಅಭ್ಯರ್ಥಿಗಳಿಂದ ದ್ವಿತೀಯ ದರ್ಜೆ ಗುಮಾಸ್ತರು ಹಾಗೂ ಗ್ರೂಪ್ ಡಿ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ
ದ್ವಿತೀಯ ದರ್ಜೆ ಗುಮಾಸ್ತ :3
ಗ್ರೂಪ್ ಡಿ : 1

ವಿದ್ಯಾರ್ಹತೆ
ದ್ವಿತೀಯ ದರ್ಜೆ ಗುಮಾಸ್ತ : ದ್ವಿತೀಯ ಪಿ.ಯು.ಸಿ ತೇರ್ಗಡೆ ಅಥವಾ ತತ್ಸಮಾನ ತರಗತಿ ತೇರ್ಗಡೆ, ಕನ್ನಡ ಭಾಷಾ ಜ್ಞಾನ, ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬೇಕು, ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಗ್ರೂಪ್ ಡಿ : ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ತರಗತಿ ತೇರ್ಗಡೆ.

ಅಗತ್ಯ ಅರ್ಹತೆ : ಕರ್ನಾಟಕ ಖಾಯಂ ನಿವಾಸಿಯಾಗಿದ್ದು, ಕನ್ನಡ ಭಾಷಾ ಜ್ಞಾನದ ಜೊತೆಗೆ ಓದಲು, ಬರೆಯಲು ಕಲಿತಿರುವುದು ಕಡ್ಡಾಯ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :12.10.2018

ಅರ್ಜಿ ಸಲ್ಲಿಕೆಯ ವಿಧಾನ:
ಅರ್ಹ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ತಮ್ಮ ಸ್ವಂತ ಬರವಣಿಗೆಯಲ್ಲಿ ಅಥವಾ ಬೆರಳಚ್ಚು ಮುಖಾಂತರ ಬ್ಯಾಂಕ್ ವೆಬ್‌ಸೈಟ್‌ನಲ್ಲಿರುವ ಅರ್ಜಿ ನಮೂನೆಯಲ್ಲಿ ಅವಶ್ಯವಿರುವ ದಾಖಲಾತಿಗಳೊಡನೆ ದೃಢೀಕರಿಸಿ ಮುಚ್ಚಿರುವ ಲಕೋಟೆಯಲ್ಲಿಯೇ ‘ದಿ ಅಕೌಂಟೆಂಟ್ ಜನರಲ್ಸ್ ಆಫೀಸ್ ಎಂಪ್ಲಾಯೀಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ ಹೆಸರಿನಲ್ಲಿ ಡಿಡಿ/ಪೇ ಆರ್ಡರ್‌ನೊಂದಿಗೆ ಕಳುಹಿಸಬೇಕು. ಲಕೋಟೆ ಮೇಲೆ ಹುದ್ದೆಯ ಹೆಸರನ್ನು ನಮೂದಿಸಬೇಕು.

ಅರ್ಜಿ ಶುಲ್ಕ:
ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗೆ ರೂ.590
ಗ್ರೂಪ್ ಡಿ ಹುದ್ದೆಗೆ ರೂ.295

ವೆಬ್‌ಸೈಟ್

www.agsbank.com

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.