ಬೆಂಗಳೂರು (ಅ. ೦೨): ಸಾಲ ಮನ್ನಾ ಯೋಜನೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಇನ್ನೂ ೧೦ ದಿನಗಳಿಗೆ ವಿಸ್ತರಿಸಿ ಸೋಮವಾರ ಸಹಕಾರ ಇಲಾಖೆ ನಿಬಂಧಕರು ಸುತ್ತೋಲೆ ಹೊರಡಿಸಿದ್ದಾರೆ. ಈ ಗಡುವು ವಿಸ್ತರಣೆ ರೈತರಿಗೂ ನೆಮ್ಮದಿ ತಂದಿದೆ.
ಸಹಕಾರ ಸಂಘಗಳಲ್ಲಿ ಒಂದು ಲಕ್ಷ ರು.ವರೆಗೆ ಸಾಲ ಮನ್ನಾ ಯೋಜನೆಯಲ್ಲಿ ಫಲಾನುಭವಿ ರೈತರಿಂದ ಪಡೆಯಬೇಕಾದ ಅರ್ಜಿ ಮತ್ತು ಸ್ವಯಂ ದೃಢೀಕರಣ ಪತ್ರದ ನಮೂನೆಯನ್ನು ಮತ್ತು ಸೆಪ್ಟೆಂಬರ್ ೧೦ಕ್ಕೆ ಹೊರ ಬಾಕಿ ಹೊಂದಿದ ಎಲ್ಲಾ ರೈತರ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲು ಸಹಕಾರ ಇಲಾಖೆ ಸೂಚಿಸಿತ್ತು.ಸಂಘದಲ್ಲಿ ಲಭ್ಯವಿರುವ ಮಾಹಿತಿಯನ್ನು ಕೂಡಲೇ ಎಕ್ಸೆಲ್ಶೀಟ್ನಲ್ಲಿ ಸಿದ್ಧಪಡಿಸಿಕೊಳ್ಳಲು ಸೂಚಿಸಲಾಗಿದೆ. ಪೂರ್ವ ನಿಗದಿತ ಸೆಪ್ಟೆಂಬರ್ವರೆಗೆ ಗಡುವು ಮುಗಿಯುವ ಸಾಲಗಳಿಗೆ ರೈತರಿಂದ ಅರ್ಜಿ ಮತ್ತು ಸ್ವಯಂ ದೃಢೀಕರಣ ಪಡೆಯಲು ಅಕ್ಟೋಬರ್ ೧೫ ವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಈ ಗಡುವು ಮುಗಿದ ನಂತರವೂ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ. ಸಾಲ ಮನ್ನಾಕ್ಕೆ ರೈತರಿಂದ ಅರ್ಜಿ ಪಡೆಯಲು ಅಕ್ಟೋಬರ್ ೨೫ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಸುತ್ತೋಲೆ ಹೊರಡಿಸಿದ್ದಾರೆ. .