ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜಯಂತಿ ಆಚರಣೆ

Advt_Headding_Middle
Advt_Headding_Middle

ಸತ್ಯ-ಅಹಿಂಸೆ ಮತ್ತು ಸ್ವಯಂ ಶಿಸ್ತು ಜನರ,ದೇಶದ ಅಭಿವೃದ್ಧಿಗೆ ಹಾದಿಯಾಗಿದೆ. ಸ್ವದೇಶಿ ಚಳುವಳಿಯ ಮೂಲಕ ಭಾರತೀಯತೆಯನ್ನು ಉಳಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಒಗ್ಗೂಡಿಸಿ ಮುನ್ನಡೆಸಿದವರು ಗಾಂಧೀಜಿ. ನಮ್ಮ ನೆಚ್ಚಿನ ಗಾಂಧಿತಾತರ ಸ್ವಯಂ ಶಿಸ್ತು, ಸತ್ಯಪಾಲನೆಯಂತಹ ಜೀವನಾದರ್ಶಗಳನ್ನು ಮೈಗೂಡಿಸಿಕೊಂಡು ನಾವು ಮುನ್ನಡೆಯಬೇಕು ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಶಿಕ್ಷಕ ಶ್ರೀ ದೇವಿಪ್ರಸಾದ್ ಜಿ ಸಿ ಹೇಳಿದರು. ಅವರು ಮಹಾತ್ಮಗಾಂಧೀಜಿಯವರ ಜೀವನಾದರ್ಶಗಳ ಬಗ್ಗೆ ಮಾತನಾಡಿದರು.
ಸರಳತೆಯ ಮೂಲಕ ಹೆಸರುವಾಸಿಯಾದವರು ಭಾರತದ ದ್ವಿತೀಯ ಪ್ರಧಾನಿ ಶ್ರೀ ಲಾಲ್ ಬಹಾದುರ್ ಶಾಸ್ತ್ರಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಇವರು ಸ್ವತಂತ್ರ ಭಾರತದಕೇಂದ್ರ ಸರಕಾರದಲ್ಲಿ ಹಲವು ಹುದ್ದೆಗಳನ್ನು ದಾಟಿ ಬಳಿಕ ಪ್ರಧಾನಿಯಾಗಿದ್ದವರು. ಕ್ಷೀರಕ್ರಾಂತಿಯ ಮೂಲಕ, ರೈಲ್ವೇಯಅಭಿವೃದ್ಧಿಯ ಮೂಲಕ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. ಅವರ ಸರಳತೆ ನಮಗೆ ಮಾದರಿಯಾಗಬೇಕುಎಂದು ಶಿಕ್ಷಕಿ ಕು| ದಿವ್ಯಾ ಕಾಳಮನೆ ಹೇಳಿದರು. ಅವರು ಶಾಸ್ತ್ರೀಜಿಯವರ ಸಂಸ್ಮರಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಶಿಕ್ಷಕ ಶ್ರೀ ರಘುರಾಮ ಭಟ್ ಸಿ ಮಾತನಾಡಿ, ಗಾಂಧೀಜಿಯವರ ಸತ್ಯ-ಅಹಿಂಸಾ ಮಂತ್ರವನ್ನು ನಾವು ಜೊತೆಗೂಡಿಸಿಕೊಂಡು, ಶಾಸ್ತ್ರೀಜಿಯವರ ಸರಳತೆಯೊಂದಿಗೆ ಸ್ವಾಭಿಮಾನವನ್ನೂ ಅಳವಡಿಸಿಕೊಳ್ಳಬೇಕು. ಭಾರತದ ಅಸ್ಮಿತೆಯನ್ನು ಎತ್ತಿಹಿಡಿಯಬೇಕುಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಶ್ರೀಮತಿ ಜಯಂತಿ ಕೆ ಸ್ವಾಗತಿಸಿ, ಕು| ದಿವ್ಯಶ್ರೀ ಕೆ ವಂದನಾರ್ಪಣೆಗೈದರು. ಶಿಕ್ಷಕಿ ಶ್ರೀಮತಿ ಸವಿತಾ ಎಂ ನಿರೂಪಿಸಿದರು. ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಪಾಲ್ಗೊಂಡರು.ಸಭಾಕಾರ್ಯಕ್ರಮದ ಮೊದಲಿಗೆ ಶ್ರಮದಾನವನ್ನು ಸಂಸ್ಥೆಯಆವರಣದಲ್ಲಿ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.