Breaking News

ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಗಾಂಧೀಜಿಯ ೧೫೦ನೇ ಜಯಂತಿ ಆಚರಣೆ

Advt_Headding_Middle
Advt_Headding_Middle

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರಪಿತ ಮಹಾತ್ಮ ಕರಮಚಂದ್ ಗಾಂಧಿಯವರು ೧೫೦ನೇ ಜನುಮ ದಿನವನ್ನು ಸೆ.೨ರಂದು ಆಚರಿಸಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರೆ| ಫಾ| ವಿನ್ಸೆಂಟ್ ಡಿ ಸೋಜಾರವರು ವಹಿಸಿಕೊಂಡು ಗಾಂಧೀಜಿಯವರ ಮಾನವೀಯತೆಯ ಬಗ್ಗೆ ಸಂಧೇಶವನ್ನು ನೀಡಿ ಶುಭಹಾರೈಸಿದರು. ತದನಂತರ ಸಂಚಾಲಕರು ಗಾಂಧೀಜಿಯವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಬಿನೋಮ ಉಪಾಸ್ಥಿತರಿದ್ದರು. ಶಿಕ್ಷಕ ಶಿವಾನಂದರವರ ಸಾರಥಿಯಲ್ಲಿ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಿದರು. ವಿದ್ಯಾರ್ಥಿ ಅಲೋಕ್ ಗಾಂಧಿಜಿಯ ಬಗ್ಗೆ ಚುಟುಕಾಗಿ ಭಾಷಣ ಮಾಡಿದರು. ತದನಂತರ ಗಾಂಧಿಜಿಯವರ ೧೫೦ನೇ ಜನ್ಮದಿನದ ಸವಿನೆನಪಿಗಾಗಿ ಸಂಚಾಲಕರ ಮಾರ್ಗದರ್ಶನದಲ್ಲಿ ಎಲ್ಲಾ ಶಾಲಾ ಶಿಕ್ಷಕ ಶಿಕ್ಷಿಯರು ವಿದ್ಯಾರ್ಥಿಗಳು ಜೊತೆ ಸೇರಿ ಶಾಲಾ ಮೈದಾನ ಆವರಣದಲ್ಲಿ ಬಾದಮ್ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪ್ರೀಮಲ್ ಡಿ ಸೋಜಾ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.