Breaking News

ಅ.3( ನಾಳೆ) ತಾಲೂಕು ವಕ್ಫ್ ಸಮಾವೇಶ: ಸಚಿವ ಜಮೀರ್ ಸುಳ್ಯಕ್ಕೆ

Advt_Headding_Middle
Advt_Headding_Middle

ಸುಳ್ಯ ತಾಲೂಕು ಮಸೀದಿ ಮದರಸ ಮುಸ್ಲಿಂ ಶಿಕ್ಷಣ ಸಂಸ್ಥೆ ಹಾಗೂ ಸ್ಥಾಪನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಇಮಾಮರುಗಳ ಮತ್ತು ಮುಖ್ಯಸ್ಥರುಗಳ ವಕ್ಫ್ ಪ್ರತಿನಿಧಿ ಸಮಾವೇಶ ಅಕ್ಟೋಬರ್ ೦೩ ಮಧ್ಯಾಹ್ನ ೦೨ ಗಂಟೆಗೆ ಸುಳ್ಯದ ಅನ್ಸಾರಿಯಾ ಯತೀಂಖಾನ ವಠಾರದಲ್ಲಿ ಜರಗಲಿರುವುದು.
ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್ ಸಚಿವ ಬಿ. ಝೆಡ್. ಜಮೀರ್ ಅಹಮ್ಮದ್ ಖಾನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಜಿಲ್ಲಾ ವಕ್ಫ್ ಸಚಿವ ಕಣಚೂರ್ ಮೋನು ಹಾಜಿ ಮೊದಲಾದವರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ತಾಲೂಕಿನ ಎಲ್ಲಾ ಮಸೀದಿಗಳ ಪ್ರತಿನಿಧಿಗಳು ಭಾಗವಹಿಸಬೇಕೆಂದು ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ. ಮುಸ್ತಫ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.