ಬಳ್ಳಕ್ಕದಲ್ಲಿ ಕೆ.ವಿ.ಜಿ ಪಾಲಿಟೆಕ್ನಿಕ್‌ನ ಎನ್.ಎಸ್.ಎಸ್. ಸೇವಾ ಸಂಗಮದಿಂದ ವಿವಿಧ ಕಾರ್ಯಕ್ರಮ

Advt_Headding_Middle
Advt_Headding_Middle

ಎನ್.ಎಸ್.ಎಸ್.ಸೇವಾ ಸಂಗಮ ರಾಷ್ಟ್ರೀಯ ಸೇವಾ ಯೋಜನೆ ಕೆ.ವಿ.ಜಿ. ಪಾಲಿಟೆಕ್ನಿಕ್ ಸುಳ್ಯ ಹಾಗೂ ಅಂಗನವಾಡಿ ಕೇಂದ್ರ ಬಳ್ಳಕ್ಕ ಮತ್ತು ಗುತ್ತಿಗಾರು ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ ಬಳ್ಳಕ್ಕ ಅಂಗನವಾಡಿ ಕೇಂದ್ರಕ್ಕೆ ಪ್ರಾಜೆಕ್ಟರ್ ಕೊಡುಗೆ, ಆಧಾರ್ ಕಾಡ್೯ ತಿದ್ದುಪಡಿ, ಪಾನ್ ಕಾಡ್೯ ನೊಂದಣಿ, ಕಾರ್ಮಿಕರ ಕಾಡ್೯ ನೊಂದಣಿ ಮತ್ತು ಸ್ವಚ್ಚತೆಯೇ ಸೇವೆ ಕಾರ್ಯಕ್ರಮ ಅ.೨ ರಂದು ಬಳ್ಳಕ್ಕ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ ನೆರವೇರಿಸಿದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗುತ್ತಿಗಾರು ಗ್ರಾ.ಪಂ.ನ ಸದಸ್ಯ ಜಯಪ್ರಕಾಶ್ ಮೊಗ್ರ, ಸದಸ್ಯೆ ಶಶಿಕಲಾ ಪೊಟ್ಟುಕೆರೆ, ಗುತ್ತಿಗಾರು ಬಾಲವಿಕಾಸ ಸಮಿತಿಯ ಅಧ್ಯಕ್ಷ ಶ್ರೀಮತಿ ಮಿತ್ರ ಕುಮಾರಿ, ಬಳ್ಳಕ್ಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸದಾಶಿವ ಭಟ್ ಗಬಲಡ್ಕ, ಪಿಎಲ್.ಡಿ. ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಚಿಕ್ಮುಳಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಸುನಿಲ್ ಕುಮಾರ್ ಎನ್.ಪಿ., ಅಂಗನವಾಡಿ ಕಾರ್ಯಕರ್ತೆ ಕು| ಲತಾ ಅಂಬೆಕಲ್ಲು ಹಾಗೂ ಎನ್.ಎನ್.ಎಸ್.ಎಸ್. ಸೇವಾ ಸಂಘಮದ ಕಾರ್ಯದರ್ಶಿ ಸುಜಿತ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಎನ್.ಎಸ್.ಎಸ್.ಸೇವಾ ಸಂಗಮದ ವತಿಯಿಂದ ಅಂಗನವಾಡಿಗೆ ಪ್ರಾಜೆಕ್ಟರ್ ಕೊಡುಗೆ ನೀಡಲಾಯಿತು. ಉದ್ಘಾಟನೆಯ ಮೊದಲು ಸ್ವಚ್ಚತಾ ಕಾರ್ಯ ನಡೆಯಿತು. ಆಧಾರ್ ಕಾಡ್೯ ಮತ್ತು ಕಾರ್ಮಿಕರ ನೋಂದಾವಣಿಯು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.ಮನೋಜ್ ಏನೆಕಲ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.