Breaking News

ಸುಳ್ಯದಲ್ಲಿ ಎನ್.ಪಿ.ಎಸ್. ನೌಕರರ ಪ್ರತಿಭಟನೆ

Advt_Headding_Middle
Advt_Headding_Middle

ಪಿಂಚಣಿ ಸೌಲಭ್ಯಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಸುಳ್ಯದಲ್ಲಿ ಅ. ೩ರಂದು ಪ್ರತಿಭಟನೆ ನಡೆಯಿತು. ಬೆಳಿಗ್ಗೆ ಸುಳ್ಯದ ಬಿಇಒ ಕಛೇರಿ ಬಳಿ ಇರುವ ಸಂಧ್ಯಾರಶ್ಮಿ ಭವನದಲ್ಲಿ ಸೇರಿದ ಎನ್‌ಪಿಎಸ್ ನೌಕರರು ಅಲ್ಲಿ ಸಭೆ ನಡೆಸಿದರು.

ಈ ಸಂದರ್ಭ ತಾಲೂಕು ಸಮಿತಿ ಅಧ್ಯಕ್ಷ ಚಂದ್ರಶೇಖರ ನಮ್ಮ ನಿವೃತ್ತಿಯ ನಂತರ ನಮಗೆ ಭದ್ರತೆ ಬೇಕಾಗಿದೆ.ಅದಕ್ಕಾಗಿ ಸರಕಾರ ಪಿಂಚಣಿ ನೀಡಬೇಕು. ೨೦೦೬ರ ಹಿಂದೆ ಸೇವೆಗೆ ಸೇರಿದ ಸರಕಾರಿ ನೌಕರರಿಗೆ ಸರಕಾರ ಯಾವ ರೀತಿಯ ಪಿಂಚಣಿ ನೀಡಲು ತಯಾರಿದೆಯೋ ಅದನ್ನೇ ೨೦೦೬ ರ ನಂತರ ಸೇರ್ಪಡೆಗೊಂಡ ನೌಕರರಿಗೂ ಕೊಡಬೇಕು. ಅದಕ್ಕಾಗಿ ನಮ್ಮ ಹೋರಾಟ. ನಾವು ರಕ್ತ ಬೇಕಾದರೂ ಕೊಟ್ಟೆವು. ಪಿಂಚಣಿ ಬಿಡೆವು ಎಂಬ ಧ್ಯೇಯದಡಿಯಲ್ಲಿ ಇಂದಿನ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು. ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ನಂದಕುಮಾರ್ ಮಾತನಾಡಿ, ಸರಕಾರಿ ನೌಕರರಿಗೆ ನಿವೃತ್ತಿಯ ನಂತರ ಪಿಂಚಣಿ ಅತೀ ಮುಖ್ಯ. ಆದ್ದರಿಂದ ನಿಮ್ಮ ಹೋರಾಟ ಯಶಸ್ಸು ಸಿಗುವವರೆಗೆ ನಡೆಯಲಿ. ನಾವು ನಿಮ್ಮ ಬೆಂಬಲಕ್ಕಿದ್ದೇವೆ ಎಂದು ಹೇಳಿದರು.
ಸಭೆಯಲ್ಲಿ ಎನ್‌ಪಿಎಸ್ ನೌಕರರ ಸಂಘದ ಕಾರ್ಯದರ್ಶಿ ಯೋಗೀಶ್ ಭರತ್, ಕೋಶಾಧಿಕಾರಿ ಉದಯಕುಮಾರ್, ಜಿಲ್ಲಾ ಕಾರ್ಯದರ್ಶಿ ಸವಿತಾ, ಪದಾಧಿಕಾರಿಗಳಾದ ಪದ್ಮನಾಭ, ತಿಪ್ಪೇಶಪ್ಪ, ನಟರಾಜ್ ಎಂ.ಎಸ್. ಇದ್ದರು.
ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.
ಮೆರವಣಿಗೆ : ಸಭೆ ಮುಗಿದ ಬಳಿಕ ನೌಕರರು ಮೆರವಣಿಗೆಯ ಮೂಲಕ ಸಾಗಿ ಕೆವಿಜಿ ವೈದ್ಯಕೀಯ ಕಾಲೇಜಿಗೆ ಬಂದು, ರಕ್ತದಾನ ಮಾಡಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ, ಕಾಲೇಜಿನ ಪ್ರಾಂಶುಪಾಲೆ ಡಾ. ಸತ್ಯವತಿ, ಡಾ. ಮಹಾಂತದೇವರು, ರಕ್ತದಾನ ವಿಭಾಗದ ಸುಪರಿಡೆಂಟ್ ಮೀನಾಕ್ಷಿ, ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಅಡ್ತಲೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಶುಭ ಹಾರೈಸಿದರು.
ಬಳಿಕ ಅಲ್ಲಿಂದ ಮೆರವಣಿಗೆ ಮತ್ತೆ ಆರಂಭಗೊಂಡು ಮೆಸ್ಕಾಂ ರಸ್ತೆ, ಜೂ.ಕಾಲೇಜು, ಮುಖ್ಯ ರಸ್ತೆಯಾಗಿ ಜ್ಯೋತಿ ಸರ್ಕಲ್ ಬಳಿಗೆ ಹೋಗಿ ವಾಪಾಸ್ ಶ್ರೀರಾಂಪೇಟೆ, ಬಾಳೆಮಕ್ಕಿ, ರಥಬೀದಿಯಾಗಿ ಸಂಧ್ಯಾರಶ್ಮಿ ತನಕ ಸಾಗಿ ಅಲ್ಲಿ ಪ್ರತಿಭಟನೆ ಸಮಾಪನಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.