ಜೋಡುಪಾಲದಲ್ಲಿ ಸಂತ್ರಸ್ತರನ್ನು ರಕ್ಷಿಸಿದ ಯುವಕರಿಗೆ ಸಚಿವರಿಂದ ತೆಕ್ಕಿಲ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ

Advt_Headding_Middle
Advt_Headding_Middle

ಜೋಡುಪಾಲದಲ್ಲಿ ಸಂಭವಿಸಿದ ಪ್ರಕೃತಿ ದುರಂತದಲ್ಲಿ ಸಂತ್ರಸ್ತರಾದ ನೂರಾರು ಮಂದಿಯನ್ನು ರಕ್ಷಿಸಿದ ಎಸ್‌ಕೆಎಸ್‌ಎಸ್‌ಎಫ್ ಮತ್ತು ಭಜರಂಗದಳದ ೧೬ ಮಂದಿ ಯುವಕರಿಗೆ ತೆಕ್ಕಿಲ್ ಗ್ರಾಮಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಘೋಷಿಸಲಾಗಿದ್ದು, ಇಂದು ನಡೆದ ಸಮಾರಂಭದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶಸ್ತಿ ಪ್ರದಾನ ಮಾಡಿದರು. ಎಸ್ಕೆಎಸ್‌ಎಸ್‌ಫ್‌ನ ತಾಜುದ್ದಿನ್ ಟರ್ಲಿ, ಜಮಾಲುದ್ದಿನ್ ಬೆಳ್ಳಾರೆ, ತಾಜುದ್ದಿನ್ ಎಸ್. ಮುನೀರ್ ಎಸ್.ಎಂ. ಅನ್ವರ್ ಕೆ.ಎಂ. ಸರ್ಫುದ್ದೀನ್, ಅಜರುದ್ದೀನ್, ಅಯ್ಯೂಫ್, ಮುಬಾರಕ್, ಆರೀಫ್ ಬೆಳ್ಳಾರೆ, ಅಬ್ದುಲ್ ಶಫೀಕ್ ಬೆಳ್ಳಾರೆ, ಅಬ್ದುಲ್ ಖಾದರ್ ಕೆ.ಎಂ., ಭಜರಂಗದಳದ ಮನೋಹರ್ ಕೆ.ಎಸ್. ಬಿಪಿನ್ ಕಲ್ಲುಗುಂಡಿ, ವಿಜಯ ನಿಡಿಂಜಿ, ದಿನೇಶ್ ಕಲ್ಲುಗುಂಡಿ ಅವರಿಗೆ ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು. ಸಹಕರಿಸಿದ ಸಂಘ ಸಂಸ್ಥೆಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

 

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಾತಿ, ಧರ್ಮ ನೋಡದೆ ಈ ಯುವಕರು ಸುಮಾರು ಇನ್ನೂರಷ್ಟು ಮಂದಿಯ ಪ್ರಾಣ ಉಳಿಸಿದ್ದಾರೆ. ಇವರೆಲ್ಲಾ ಬಡವರು. ಶ್ರೀಮಂತರು  ಇಂತಹ ಸೇವೆಗೆ ಬರುವುದಿಲ್ಲ. ಅವರು ಊರಿನ ನಿಜವಾದ ಹೀರೋಗಳು ಎಂದು ಕೊಂಡಾಡಿದರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚ್ಚೂರ್ ಮೋನು, ಸದಸ್ಯ ನೂರುದ್ದಿನ್ ಸಾಲ್ಮರ, ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ, ಗ್ರಾ.ಪಂ. ಅಧ್ಯಕ್ಷೆ ಸುಂದರಿ ಮುಂಡಡ್ಕ, ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಕೆಫೆಕ್ ನಿರ್ದೇಶಕ ಪಿ.ಎ.ಮಹಮ್ಮದ್, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.