Breaking News

ಅ.18,19 : ದರ್ಖಾಸ್ತು 13 ನೇ ವರ್ಷದ ಶಾರದೋತ್ಸವ

Advt_Headding_Middle
Advt_Headding_Middle

ಶ್ರೀ ಶಾರದಾಂಬಾ ಸೇವಾ ಸಮಿತಿ ದರ್ಖಾಸ್ತು ವತಿಯಿಂದ ೧೩ ನೇ ವರ್ಷದ ಶ್ರೀ ಶಾರದೋತ್ಸವವು ಅ.೧೮ ಮತ್ತು ೧೯ ರಂದು ದರ್ಖಾಸ್ತು ಶಾಲಾ ಅಕ್ಷಯ ರಂಗಮಂದಿರದಲ್ಲಿ ನಡೆಯಲಿದೆ.


ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಕುಂತಳಾ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.ಪೆರಾಜೆ ಜ್ಯೋತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪುರುಷೋತ್ತಮ ಕಿರ್ಲಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ,ಜಾಲ್ಸೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮೆನೇಜರ್ ನಟರಾಜನ್, ದರ್ಖಾಸ್ತು ಸ.ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಸುಜಾತ ಜನಾರ್ಧನ ಕಲ್ಲೋಣಿ,ಶಾಲಾ ಮುಖ್ಯ ಶಿಕ್ಷಕ ಶಾಂತರಾಮ ,ಮುತ್ತುಮಾರಿಯಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನ್ನದಾಸನ್ ಉಪಸ್ಥಿತರಿರುವರು.
ಅ.೧೮ ರಂದು ಬೆಳಿಗ್ಗೆ ಶ್ರೀ ಶಾರದಾಂಬಾ ವಿಗ್ರಹ ಪ್ರತಿಷ್ಟಾಪನೆ,ಗಣಪತಿ ಹೋಮ,ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಬೋವಿಕ್ಕಾನ ಇವರಿಂದ ಭಜನಾ ಕಾರ್ಯಕ್ರಮ ಮದ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ವಾಹನ ಪೂಜೆ, ರಾತ್ರಿ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದರ್ಖಾಸ್ತು ಶಾಲಾ ಮಕ್ಕಳಿಂದ ಹಾಗೂ ಊರವರಿಂದ , ನಂತರ ಸಿಂಚನಾ ಆರ್ಕೆಸ್ಟ್ರಾ ಸುಳ್ಯ ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ.
ಅ.೧೯ ರಂದು ಬೆಳಿಗ್ಗೆ ಆಟೋಟ ಸ್ಪರ್ಧೆಗಳು ನಡೆಯಲಿದ್ದು ಕ್ರೀಡಾಕೂಟವನ್ನು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ ಉದ್ಘಾಟಿಸಲಿದ್ದಾರೆ.ನಂತರ ಕ್ರೀಡಾಕೂಟ ನಡೆಯಲಿದೆ. ಮಧ್ಯಾಹ್ನ ಶಾರದಾಂಬೆಯ ವೈಭವದ ಶೋಭಾಯಾತ್ರೆ ನಡೆದು ಜಲಸ್ತಂಭನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.