ಕೆ.ವಿ.ಜಿ.ಐ.ಪಿ.ಎಸ್. ನಲ್ಲಿ ಗಾಂಧೀ ಮತ್ತು ಶಾಸ್ತ್ರಿ ಜಯಂತಿ ಆಚರಣೆ

Advt_Headding_Middle
Advt_Headding_Middle

ಸುಳ್ಯದ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲಾ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ದೇಶ ಕಂಡ ಅತ್ಯುತ್ತಮ ನಾಯಕ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಅ. ೨ರಂದು ಆಚರಿಸಲಾಯಿತು.

ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೆ.ವಿ.ಜಿ.ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗ ಮುಖ್ಯಸ್ಥರಾದ ಡಾ.ಚಂದ್ರಶೇಖರ್ ಮುಖ್ಯ ಅತಿಥಿ ನೆಲೆಯಲ್ಲಿ ಭಾಗವಹಿಸಿ ಈರ್ವರು ನಾಯಕರ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಸರ್ವಧರ್ಮ ಪ್ರಾರ್ಥನೆ ಮೂಡಿಬಂತು. ಕೆ.ವಿ.ಜಿ.ಐ.ಪಿ.ಎಸ್ ನ ಪ್ರಾಚಾರ್ಯರಾದ ಸುನಿಲ್ ಕುಮಾರ್.ಕೆ.ಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಈರ್ವರು ನಾಯಕರ ಜೀವನ ಸಾಧನೆಗಳನ್ನು ಬಣ್ಣಿಸಿ ಸತ್ಯ,ಅಹಿಂಸೆ ಹಾಗೂ ಶಾಂತಿಯ ಅವಶ್ಯಕತೆ ಇಂದಿನ ಯುವಪೀಳಿಗೆಗೆ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಗಾಂಧೀಜಿ ನಮಗೆ ಆದರ್ಶಪ್ರಾಯರು ಎಂದು ಹೇಳಿದರು. ಕನ್ನಡ ಶಿಕ್ಷಕಿ ಮಮತಾ ಸ್ವಾಗತಿಸಿ ವಂದಿಸಿದರು. ಕೆ.ವಿ.ಜಿ.ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಯಶೋದಾ, ಉಪಪ್ರಾಚಾರ್ಯರಾದ ದೀಪಕ್.ವೈ.ಆರ್., ವಿದ್ಯಾರ್ಥಿ ಪೋಷಕರು, ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.