ಕಾಂತಮಂಗಲ ಸೇತುವೆ ದುರಸ್ತಿ ಗೆ ಯುವ ಜೆಡಿಎಸ್ ಪ್ರಯತ್ನ ಬಿಜೆಪಿ ಯಿಂದ ಫ್ಲೆಕ್ಸ್ ರಾಜಕೀಯ : ಆಕ್ಷೇಪ

Advt_Headding_Middle
Advt_Headding_Middle

ಸುಳ್ಯ ದಿಂದ ಅಜ್ಜಾವರಕ್ಕೆ ಸಂಪರ್ಕ ಕಲ್ಪಿಸುವ ಕಾಂತಮಂಗಲ ದುರಸ್ತಿ ಆಗುವಲ್ಲಿ ಯುವ ಜೆಡಿಎಸ್ ಪ್ರಮುಖ ಪಾತ್ರ ವಹಿಸಿದೆ. ಆದರೆ ಇದೀಗ ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿ ಫ್ಲೆಕ್ಸ್ ಗಳನ್ನು ಹಾಕಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಇದು ಸರಿಯಲ್ಲ ಎಂದು ಯುವ ಜೆಡಿಎಸ್ ಅಧ್ಯಕ್ಷ ಜೀವನ್ ನಾರ್ಕೋಡ್ ಹೇಳಿದರು.


ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಅಜ್ಜಾವರ ಭಾಗದ ಮನವಿಯಂತೆ ಯುವ ಜನತಾದಳ ಈ ವಿಚಾರದಲ್ಲಿ ಮುಖ್ಯಮಂತ್ರಿ ಗಳಿಗೆ 11-06-2018ರಂದು ಮನವಿ ಸಲ್ಲಿಸಿದ್ದು ಕೂಡಲೇ ಸ್ಪಂದಿಸಿದ ಮುಖ್ಯ ಮಂತ್ರಿಗಳು ಜಿಲ್ಲಾಧಿಕಾರಿ ಗಳಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು.ಬಳಿಕ ಡಿ.ಸಿ.ಯವರು ಪರಿಶೀಲಿಸಿ ಎಸ್.ಡಿ.ಆರ್.ಎಫ್. ನಿಧಿಯಿಂದ ಮಂಗಳೂರು ಜಿ.ಪಂ. ವಿಭಾಗದ ಇಂಜಿನಿಯರ್ ರಿಗೆ ಅಂದಾಜು ಪಟ್ಟಿ ತರಿಸಿ ಅನುಮೋದನೆ ನೀಡಿದರು.
ಆದರೆ ಬಿಜೆಪಿ ಪಕ್ಷದವರು ಈಗ ಸುಳ್ಳು ಪ್ರಚಾರ ಮಾಡುತ್ತಾ ಫ್ಲೆಕ್ಸ್ ಗಳನ್ನು ಹಾಕಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವುದನ್ನು ಯುವ ಜನತಾದಳ ಖಂಡಿಸುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಜಾಕೆ, ರೋಹನ್ ಪೀಟರ್, ರಾಮಚಂದ್ರ ಬಳ್ಳಡ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.