ಅಣ್ಣನ ಬದಲು ನ್ಯಾಯಾಲಯಕ್ಕೆ ಹಾಜರಾದ ತಮ್ಮ- ಪೊಲೀಸರಿಗೊಪ್ಪಿಸಿದ ನ್ಯಾಯಾಧೀಶರು

Advt_Headding_Middle
Advt_Headding_Middle

ಸವಣೂರು ಸಮೀಪ ನಡೆದಿದ್ದ ಪ್ರಕರಣವೊಂದರ ವಿಚಾರಣೆ ಸಂದರ್ಭ ಆರೋಪಿಯ ಬದಲು ಆತನ ತಮ್ಮ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರು ಆತನನ್ನು ಪೊಲೀಸರ ವಶಕ್ಕೊಪ್ಪಿಸಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದ ಘಟನೆ ಸುಳ್ಯದಲ್ಲಿ ನಡೆದಿದೆ.

2017 ರ ಜೂನ್ 11ರಂದು ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರು ಶಾಂತಿನಗರ ಸಮೀಪ ನಡೆದಿದ್ದ ಹೊಡೆದಾಟ ಪ್ರಕರಣವೊಂದರ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆಯುತ್ತಿದೆ.ಪ್ರಕರಣದ ಆರೋಪಿಯಾಗಿರುವ, ಮುಂಡತ್ತಡ್ಕ ಅಬ್ದುಲ್ ರಹಿಮಾನ್ ಅವರ ಮಗ ಸಿದ್ಧೀಕ್ ಬದಲಿಗೆ ಅವರ ತಮ್ಮ ಶರೀಫ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ನೀನಾ ಸಿದ್ದೀಕ್..?
ಘಟನೆಗೆ ಸಂಬಂಧಿಸಿದಂತೆ ನವಾರh, ಹ್ಯಾರೀಸ್ ಮತ್ತು ಸಿದ್ದೀಕ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣದ ವಿಚಾರಣೆ ಈಗಾಗಲೇ ಸುಳ್ಯದ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಮೂವರು ಆರೋಪಿಗಳು ಅ.೫ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.ಈ ಪೈಕಿ ಸಿದ್ಧಿಕ್ ಬದಲು ಆತನ ತಮ್ಮ ಶರೀಫ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.ಬೆಳಿಗ್ಗೆ ೧೧ ಗಂಟೆಗೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.ಇಬ್ಬರು ಆರೋಪಿಗಳನ್ನು ವಿಚಾರಿಸಿ ಕೊನೆಯದಾಗಿ ಆರೋಪಿ ಸಿದ್ಧೀಕ್ ಪರ ಹಾಜರಾಗಿದ್ದ ಶರೀಫ್ ಅವರನ್ನು ವಿಚಾರಣೆಗೊಳಪಡಿಸಿದ ನ್ಯಾಯಾಧೀಶರು ‘ನೀನು ಸಿದ್ಧೀಕಾ? ನಿನ್ನ ಮೇಲೆ ನನಗೆ ಅನುಮಾನವಿದೆ’ ಎಂದರು.’ನಾನೇ ಸಿದ್ಧೀಕ್’ ಎಂದು ಶರೀಫ್ ಹೇಳಿದಾಗ ಜತೆಗಿದ್ದ ಇತರ ಇಬ್ಬರು ಆರೋಪಿಗಳಲ್ಲಿ ನ್ಯಾಯಾಧೀಶರು ಪ್ರಶ್ನಿಸಿದಾಗ ಅವರೂ, ಈತ ಸಿದ್ಧೀಕ್ ಎಂದು ಉತ್ತರಿಸಿದರು.’ನಿನಗೆ ಸಂಜೆ ೩ ಗಂಟೆ ತನಕ ಅವಕಾಶ ನೀಡುತ್ತೇನೆ.ಅದರ ಮೊದಲು ನಿನ್ನ ಐಡಿ ಪ್ರೂಫ್ ದಾಖಲೆಗಳನ್ನು ತಂದೊಪ್ಪಿಸಬೇಕು.ಆ ಬಳಿಕವೇ ನಿನ್ನನ್ನು ಬಿಡುಗಡೆ ಮಾಡುವುದು’ ಎಂದು ನ್ಯಾಯಾಧೀಶ ಪುರುಷೋತ್ತಮರವರು, ಸಿದ್ಧೀಕ್ ಎಂದು ಹಾಜರಾಗಿದ್ದ ಶರೀಫ್‌ಗೆ ಸೂಚನೆ ನೀಡಿದರಲ್ಲದೆ ಮೂವರನ್ನೂ ಪೊಲೀಸರ ವಶಕ್ಕೆ ಒಪ್ಪಿಸಿದರು.ಬಳಿಕ ಶರೀಫ್ ಅವರ ತಂದೆ ಹಾಗೂ ಸಹೋದರ ಆಗಮಿಸಿ ಶರೀಫ್‌ಗೆ ಸಂಬಂಧಿಸಿದ ದಾಖಲೆಗಳ ಪ್ರತಿಯನ್ನು ಒದಗಿಸಿದಾಗ ಸಿದ್ಧೀಕ್ ಬದಲು ಶರೀಫ್ ನ್ಯಾಯಾಲಯಕ್ಕೆ ಹಾಜರಾಗಿದ್ದ ವಿಚಾರ ಸ್ಪಷ್ಟವಾಯಿತು.

ಬಳಿಕ ನ್ಯಾಯಾಧೀಶರು ಅಲ್ಲೇ ಇದ್ದ ಸುಳ್ಯ ಠಾಣೆಯ ಪೊಲೀಸ್ ಸಿಬಂದಿಯನ್ನು ಕರೆದು ನಿಮ್ಮ ಎಸ್.ಐ.ಯವರನ್ನು ಕರೆಯಿರಿ ಎಂದು ಹೇಳಿದರು.ಅದರಂತೆ ಅಲ್ಲಿಗೆ ಆಗಮಿಸಿದ ಎಸ್.ಐ.ಮಂಜುನಾಥ್‌ರವರಿಗೆ ಆರೋಪಿಗಳನ್ನು ಒಪ್ಪಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ನೀಡಿದರು.ಆರೋಪಿಗಳ ಜೊತೆಗೆ ಶರೀಫ್ ಅವರ ದಾಖಲೆಪತ್ರಗಳನ್ನು ತಂದೊಪ್ಪಿಸಿದ್ದ ಆತನ ತಂದೆ ಹಾಗೂ ಸಹೋದರನನ್ನೂ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.ಸಿದ್ದೀಕ್ ಬದಲು ಆತನ ತಮ್ಮ ನ್ಯಾಯಾಲಯಕ್ಕೆ ಹಾಜರಾಗಿ ವಂಚನೆ ಎಸಗಿ ನ್ಯಾಯಾಲಯದ ಹಾದಿ ತಪ್ಪಿಸಿರುವ ಕುರಿತು, ನ್ಯಾಯಾಧೀಶರ ನಿರ್ದೇಶನದ ಮೇರೆಗೆ ನ್ಯಾಯಾಲಯದ ಶಿರಸ್ತೇದಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಸಿದ್ಧೀಕ್ ಆರು ತಿಂಗಳ ಹಿಂದೆ ವಿದೇಶಕ್ಕೆ ಹೋಗಿದ್ದು ಕಳೆದ ಮೂರು ವಾಯ್ದೆಯಲ್ಲಿ ಸಿದ್ಧೀಕ್ ಪರವಾಗಿ ತಮ್ಮ ಶರೀಫ್ ನ್ಯಾಯಾಲಯಕ್ಕೆ ಹಾಜರಾಗಿದ್ದರೆಂದು ಹೇಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.