Breaking News

ಕುಲ್ಕುಂದ ಬಸವೇಶ್ವರ ದೇವಸ್ಥಾನದ ಕಳವು ಪ್ರಕರಣ – ಜೈಲಿನಲ್ಲಿದ್ದ ಕಳವು ಆರೋಪಿ ವಿಚಾರಣೆ: ತಪ್ಪೊಪ್ಪಿಗೆ

Advt_Headding_Middle
Advt_Headding_Middle

ಮನೆ ಹಾಗೂ ಮಂದಿರಗಳಲ್ಲಿ ಕಳ್ಳತನ ನಡೆಸಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಿದ್ದ ಪ್ರಖ್ಯಾತ ಚೋರ ತುಮಕೂರು ಮೂಲದ ನವೀನ್ (೨೬) ಎಂಬಾತ ೨೦೧೭ರಲ್ಲಿ ಕುಲ್ಕುಂದ ಶ್ರೀ ಬಸವನಮೂಲೆ ಬಸವೇಶ್ವರ ದೇವಸ್ಥಾನ ಮತ್ತು ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಇಚಿಲಂಪಾಡಿ ಚರ್ಚ್‌ನಲ್ಲಿ ಕಳವು ನಡೆಸಿದ್ದನ್ನು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ.

ಪೊಲೀಸರನ್ನು ನವೀನ್‌ನನ್ನು ಅ. ೫ರಂದು ರಾತ್ರಿ ಬಸವನಮೂಲೆ ಬಸವೇಶ್ವರ ದೇವಸ್ಥಾನ, ಬಿಳೆನೆಲೆ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಕಡಬದ ಇಚಿಲಂಪಾಡಿ ಚರ್ಚ್‌ಗ ಕರೆತಂದು ತನಿಖೆ ನಡೆಸಿದ್ದಾರೆ. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಬಗ್ಗೆ ಆತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಈತನನ್ನು ತನಿಖೆಗಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ಇರಿಸಿಕೊಮಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.