ಬೆಳ್ಳಾರೆ: ಸ್ನೇಹಿತರ ಕಲಾ ಸಂಘದ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಸ್ನೇಹಿತರ ಕಲಾ ಸಂಘ (ರಿ.) ಬೆಳ್ಳಾರೆ ಇದರ ೨೦೧೭-೧೮ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. ೩೦ರಂದು ಬೆಳ್ಳಾರೆಯ ಸ್ನೇಹಿತರ ಕಲಾ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಆನಂದ ಗೌಡ ಪಡ್ಪು ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘದ ಕಾರ್ಯದರ್ಶಿ ಸಂಜಯ್ ನೆಟ್ಟಾರ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಕೊರಗಪ್ಪ ನಾಯ್ಕ ಕುರುಂಬುಡೇಲು ವಾರ್ಷಿಕ ಜಮಾ ಖರ್ಚು ಲೆಕ್ಕಪತ್ರ ಮಂಡಿಸಿದರು. ಸಭೆಯು ಧ್ವನಿಮತದಿಂದ ಅಂಗೀಕರಿಸಿತು. ನಂತರ ಗತ ವರ್ಷ ನಡೆದ ಕಾರ್ಯಕ್ರಮದ ಅವಲೋಕನ ನಡೆಯಿತು. ಸಂಘಕ್ಕೆ ಸಿದ್ದಪಡಿಸಲಾದ ನೂತನ ಕಾರ್ಯಕ್ರಮಗಳನ್ನು ಅಂಗೀಕರಿಸಲಾಯಿತು.. ಸಭೆಯಲ್ಲಿ ಸೇರಿದ ಸದಸ್ಯರು ಸೂಕ್ತ ಸಲಹೆ ಸೂಚನೆಗಳನ್ನು ಗಳನ್ನು ನೀಡಿದರು. ತದ ನಂತರ ೨೦೧೮-೧೯ನೇ ಸಾಲಿನ ನೂತನ ಪದಾಧಿಕಾರಿಗಳನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಕೊರಗಪ್ಪ ನಾಯ್ಕ ಕುರುಂಬುಡೇಲು, ನಿಕಟ ಪೂರ್ವಾಧ್ಯಕ್ಷರಾಗಿ ಆನಂದ ಗೌಡ ಪಡ್ಪು, ಉಪಾಧ್ಯಕ್ಷರಾಗಿ ಶಂಕರ ಪಾಟಾಳಿ ಬೀಡು, ಕಾರ್ಯದರ್ಶಿಯಾಗಿ ಸಂಜಯ್ ನೆಟ್ಟಾರ್, ಕೋಶಾಧಿಕಾರಿಯಾಗಿ ವಸಂತ ಪಡ್ಪು, ಜತೆ ಕಾರ್ಯದರ್ಶಿಯಾಗಿ ಸುಪ್ರೀತ್ ಬಸ್ತಿಗುಡ್ಡೆ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯಂತ ಪೂಜಾರಿ ಕಾವಿನಮೂಲೆ ಹಾಗೂ ಶಿವರಾಮ ನಾಯಕ್ ಪನ್ನೆ ವಸಂತ ಉಲ್ಲಾಸ್, ಅಶೋಕ ಪೂಜಾರಿ ಪಳ್ಳಿಮಜಲು, ಉಮೇಶ್ ನೆಟ್ಟಾರು, ಪದ್ಮನಾಭ ಚೂಂತಾರು, ಶ್ರೀನಿವಾಸ ಕುರುಂಬುಡೇಲು ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಸದಸ್ಯರ ಸೂಚನೆ ಹಾಗು ಅನುಮೋದನೆಯೋದಿಗೆ ಆರಿಸಲಾಯಿತು. ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ತಾಲೂಕು ಇದರ ಗೌರವಾಧ್ಯಕ್ಷರಾದ ಚಂದ್ರಶೇಖರ ಪನ್ನೆ, ನಿಕಟಪೂರ್ವಾಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ, ಉಪಾಧ್ಯಕ್ಷರಾದ ಅಮೃತ ಕುಮಾರ್ ಕಿಲಂಗೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಶಶಿಧರ ಬೀಡು ಸ್ವಾಗತಿಸಿ, ಕಾರ್ಯದರ್ಶಿ ಸಂಜಯ್ ನೆಟ್ಟಾರ್ ವಂದಿಸಿದರು. ವಸಂತ ಪಡ್ಪು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.