ಪೆರಾಜೆ : ವಿಷ ಸೇವಿಸಿ ಯುವಕ ಆತ್ಮಹತ್ಯೆ

Advt_Headding_Middle
Advt_Headding_Middle

ಪೆರಾಜೆ ಗ್ರಾಮದ ಪೀಚೆ ಮಾದವರವರ ಪುತ್ರ ರಾಜೇಶ 40 ವರ್ಷ ಸೆ 26 ರಂದು ವಿಷ ಸೇವಿಸಿ ಚಿಂತಾಜನಕ ಸ್ಥಿತಿ ಯಲ್ಲಿ ಆಸ್ಪತ್ರೆಗೆ ಸೇರಿಸಲ್ಪಟ್ಟು ಸೆ.೩೦ ರಂದು ಮಂಗಳೂರಿನ ಆಸ್ಪತ್ರೆಯ ಲ್ಲಿ ನಿಧನ ರಾದರು ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ‌.

ರಾಜೇಶ್ ರವರು ಮಂಗಳೂರಿನ ಖಾಸಗಿ ಕಂಪನಿಯೋಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಅವರ ಪತ್ನಿ ಉಷಾ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಶುಶ್ರೂಕಿ ಯಾಗಿ ಸೇವೆ ಸಲ್ಲಿಸುತ್ತಿದ್ದರು.ಇತ್ತಿಚೆಗೆ ರಾಜೇಶ್ ತಂದೆ ಮಾದವರವರು ಮಂಗಳೂರಿನ ಆಸ್ಪತ್ರೆಗೆ ಸ್ಟೋನ್‌ ಸಮಸ್ಯೆ ಯಿಂದ ದಾಖಲಾಗಿದ್ದರು. ಅವರು ಗುಣಮುಖ ವಾಗಿ ಹಿಂತಿರುಗುವ ವೇಳೆ ರಾಜೇಶ್ ಕೂಡಾ ಮನೆಗೆ ಜೊತೆಯಲ್ಲಿ ಬಂದಿದ್ದರು. ಅನಂತರ ಅವರು ಕೆಲಸಕ್ಕೆ ತೆರಳಲಿಲ್ಲ ವೆನ್ನಲಾಗಿದೆ.ಈ ಸಮಯದಲ್ಲಿ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಅವರು ಮನೆಯಲ್ಲಿ ಯಾರು ಇಲಗಲದ್ದಿದ್ದವೇಳೆ ಯಲ್ಲಿ ಮನೆಯಲ್ಲಿದ್ದ ಕೀಟನಾಶಕ ಸೇವಿಸಿ ಗಂಭೀರ ಪರಿಸ್ಥಿತಿ ಯಲ್ಲಿದ್ದು ಮನೆಯವರು ಕೂಡಲೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಮತ್ತೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಚೇತರಿಕೊಳ್ಳದೆ ಸೆ.೩೦ ರಂದು ನಿಧನ ರಾದರು ಇವರು ತಂದೆ ಮಾದವ , ತಾಯಿ ಕಮಲ , ಪತ್ನಿ ಉಷಾ ಸಹೋದರ ಲೋಹಿತ್ , ಸಹೋದರಿ ಹೇಮಲತರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.