ಕುಂಡ ಅಜಿಲ ಸಂಪ್ಯಾಡಿ ನಿಧನ

Advt_Headding_Middle
Advt_Headding_Middle

ಬಳ್ಪ ಗ್ರಾಮದ ಕುಂಡ ಅಜಿಲ ಸಂಪ್ಯಾಡಿಯವರು ಅ. ೫ರಂದು ನಿಧನರಾದರು. ಅವರಿಗೆ ೯೩ ವರ್ಷ ವಯಸ್ಸಾಗಿತ್ತು. ಕುಂಡ ಅಜಿಲರು ದೈವನರ್ತದಲ್ಲಿ ಪ್ರಖ್ಯಾತರಾಗಿದ್ದರು. ಸುಮಾರು ೬೮ ವರ್ಷಗಳಿಂದ ಶೀರಾಡಿ ರಾಜನ್ ದೈವಸ್ಥಾನ ನೇರ್ಪು, ಮುಡ್ನೂರು ಉಳ್ಳಾಕುಳು, ಯೇನೆಕಲ್ಲು ಬಾನಡ್ಕ ಗ್ರಾಮ ದೈವ ಕುಂಟಾರು ಚಾಮುಂಡಿ ಸೇರಿದಂತೆ ಊರಲ್ಲಿ ಅನೇಕ ದೈವ ನರ್ತನದಲ್ಲಿ ಭಾಗವಹಿಸಿ ದೈವದ ಮುಡಿ ಧಾರಣೆ ಮಾಡುತ್ತಿದ್ದರು. ಮೃತರು ಪತ್ನಿ ಶ್ರೀಮತಿ ಪುಟ್ಟು, ಓರ್ವ ಪುತ್ರ ತಂದೆಯ ಕಾಯಕವನ್ನೇ ಮುಂದುವರಿಸುತ್ತಿರುವ ಗೋಪಾಲ ಸಂಪ್ಯಾಡಿ, ಐವರು ಪುತ್ರಿಯರಾದ ಶ್ರೀಮತಿ ಶೇಷಮ್ಮ ಐತ್ತೂರು, ಶ್ರೀಮತಿ ಗೋಪಿ ಸುಳ್ಯ, ಶ್ರೀಮತಿ ಅಮಿತಾ ಇರಾ, ಶ್ರೀಮತಿ ಗುಲಾಬಿ ಕುಪ್ಪೆಪದವು ಮತ್ತು ಕು. ಬೇಬಿಯವರನ್ನು ಅಗಲಿದ್ದಾರೆ. ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಬೀದಿಗುಡ್ಡೆ, ಸುಬ್ರಹ್ಮಣ್ಯದಲ್ಲಿ ನಡೆದ ಸುಬ್ರಹ್ಮಣ್ಯ ವಲಯ ಸುವರ್ಣ ಕರ್ನಾಟಕ ಸಂಸ್ಕೃತಿ ದಿಬ್ಬಣ ಜಾಥಾ, ಆದರ್ಶ ಗ್ರಾಮ ಬಳ್ಪದ ಗ್ರಾಮೋತ್ಸವ ಕಾರ್ಯಕ್ರಮ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಇವರು ಸನ್ಮಾನಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.