ಅ. 10 ರಿಂದ 18 : ಯೇನೆಕಲ್ಲು ಶ್ರೀ ಆದಿಶಕ್ತಿ ಸಭಾಭವನದಲ್ಲಿ ನವರಾತ್ರಿ ಆಚರಣೆ

Advt_Headding_Middle
Advt_Headding_Middle

ಯೇನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ನವರಾತ್ರಿ ಹಬ್ಬದ ಆಚರಣೆಯು ಅ. 1೦ರಿಂದ ಅ. 18ರ ತನಕ ನಡೆಯಲಿದೆ.

ಪ್ರತೀ ದಿನ ಯೇನೆಕಲ್ಲಿನ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಅ. ೧೦ರಂದು ಸಂಜೆ ೬.೦೦ ಗಂಟೆಗೆ ಶ್ರೀಮತಿ ಗಿರಿಜಾ ಈಶ್ವರ ಮಾಸ್ತರ್ ನೆಕ್ರಾಜೆ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಅ. ೧೭ರಂದು ರಾತ್ರಿ ೮.೦೦ ಗಂಟೆಯಿಂದ ಪ್ರವೀಣ್ ಯೇನೆಕಲ್ಲು ಮತ್ತು ತಂಡದವರಿಂದ ಕೊಳಲು ಮತ್ತು ಸ್ಯಾಕ್ಸೋಫೋನ್ ವಾದನ ನಡೆಯಲಿದೆ. ಅ. ೧೮ರಂದು ರಾತ್ರಿ ಗಂಟೆ ೮.೦೦ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಯೇನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂದಿರದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಹಿಂದೂ ಜಾಗರಣ ವೆದಿಕೆಯ ಪ್ರಧಾನ ಕಾರ್ಯದರ್ಶಿ ಬಿ ಗಣರಾಜ ಭಟ್ ಕೆದಿಲ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ ೯.೦೦ ಗಂಟೆಗೆ ಅನ್ನಸಂತರ್ಪಣೆ ಬಳಿಕ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತಂಡ ಮುಗುಲಿ ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀನಿವಾಸ ಮುಗುಲಿಯವರ ಸಂಯೋಜನೆಯಲ್ಲಿ ಶ್ರೀದೇವಿ ಮಹಿಷಮರ್ದಿನಿ ಎಂಬ ಪೌರಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.