Breaking News

ದೇವಚಳ್ಳದ ವ್ಯಕ್ತಿ ಕಾಣೆಯಾಗಿದ್ದಾರೆ

Advt_Headding_Middle
Advt_Headding_Middle

ದೇವಚಳ್ಳ ಗ್ರಾಮದ ಎಲಿಮಲೆ ಬಳಿಯ ಆನಂದ ಕಲ್ಲುಪಣೆ ಎಂಬವರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಅ.೨ರಂದು ಬೊಳ್ಳಾಜೆ ನಿವೃತ್ತ ಶಿಕ್ಷಕಿ ಶ್ಯಾಮಲಾ ಎಂಬವರ ಮನೆಯಲ್ಲಿ ಕೊಟ್ಟಿಗೆ ಕೆಲಸಕ್ಕೆ ಗಣೇಶ ಎಂಬವರು ಆನಂದರವನ್ನು ಕರೆದುಕೊಂಡು ಹೋಗಿದ್ದರು. ಕೆಲವು ಸಾಮಾಗ್ರಿಗಳನ್ನು ತರಲು ಇದ್ದುದರಿಂದ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಗಣೇಶರವರು ಸುಳ್ಯಕ್ಕೆ ತೆರಳಿದ್ದರು. ಆದರೆ ಸುಳ್ಯದಿಂದ ಆನಂದರವರಿಗೆ ಕರೆ ಮಾಡಿದಾಗ ದೂರವಾಣಿ ಗೆ ಪ್ರತಿಕ್ರಿಯೆ ಸಿಗಲಿಲ್ಲವೆಂದೂ, ಆನಂದರವರು ಕೆಲಸ ಮಾಡುತ್ತಿದ್ದಲ್ಲಿ ಇಲ್ಲದ ಬಗ್ಗೆ ಗಮನಕ್ಕೆ ಬಂದು ಆಸುಪಾಸುಗಳಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದರೂ ಆನಂದರವರ ಸುಳಿವು ಸಿಗಲಿಲ್ಲವ್ನೆನಲಾಗಿದೆ. ಆನಂದರವರು ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ಸುಳ್ಯ ಪೋಲೀಸರಿಗೆ ದೂರು ನೀಡಿದ್ದಾರೆ. ಆನಂದರವರು ತುಳು, ಕನ್ನಡ ಭಾಷೆ ಮಾತನಾಡುತ್ತಿದ್ದು, ಮರದ ಕೆಲಸ ಮಾಡುತ್ತಿದ್ದರು. ಅವರಿಗೆ ಸುಮಾರು ೫೨ ವರ್ಷ ಪ್ರಾಯವಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.