ಗುರುಂಪು: ವಿದ್ಯುತ್ ಶಾಕ್ ಯುವಕ ದುರ್ಮರಣ

Advt_Headding_Middle
Advt_Headding_Middle

ಸುಳ್ಯದ ಗಾಂಧಿನಗರ ಗುರುಂಪು ಎಂಬಲ್ಲಿ ನವೀನ್ ಕುಮಾರ್ ಎಂಬವರ ಮಾಲಕತ್ವದ ಶ್ರೀ ದುರ್ಗಾ ಇಂಡಸ್ಟ್ರೀಯಲ್‌ನಲ್ಲಿ ಉದ್ಯೋಗಿಯಾಗಿದ್ದ ದುಗಲಡ್ಕದ ನಾಗರಾಜ್ ಕಂದಡ್ಕ (೧೮ ವರ್ಷ)ರವರು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವ ಘಟನೆ  ಅ.೮ರಂದು ವರದಿಯಾಗಿದೆ.
ಎಂದಿನಂತೆ ಬೆಳಿಗ್ಗೆ ೯ ಗಂಟೆಯ ಹೊತ್ತಿಗೆ ಇಂಡಸ್ಟ್ರೀಗೆ ಬಂದು ಕೆಲಸ ಪ್ರಾರಂಭಿಸಲು ವಿದ್ಯುತ್ ಕನೆಕ್ಷನ್ ಮಾಡುವ ವೇಳೆ ಶಾಕ್ ಹೊಡೆದು ಸ್ಥಳದಲ್ಲೆ ಬಿದ್ದರು. ಈ ಸಂದರ್ಭದಲ್ಲಿ ಇಂಡಸ್ಟ್ರೀಯಲ್ಲಿ ಒಬ್ಬನೇ ಇದ್ದುದ್ದರಿಂದ ಯಾರಿಗೂ ತಿಳಿದಿರಲಿಲ್ಲ. ಬಳಿಕ ಅಲ್ಲಿನ ಸ್ಥಳೀಯರು ಬಂದು ನೋಡಿದಾಗ ಯುವಕ ಬಿದ್ದಿರುವುದು ಗಮನಕ್ಕೆ ಬಂದು ತಕ್ಷಣ ಇಂಡಸ್ಟ್ರೀಯ ಮಾಲಕರಿಗೆ ಹಾಗೂ ಪೋಲೀಸ್ ಇಲಾಖೆಗೆ ಸುದ್ದಿ ತಿಳಿಸಿದರು. ನಂತರ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಶವವನ್ನು ತರಲಾಯಿತು.
೮ ತಿಂಗಳ ಹಿಂದೆ ಇಂಡಸ್ಟ್ರೀಗೆ ಸೇರ್ಪಡೆಗೊಂಡ ಯುವಕ ಮನೆಗೆ ಆಧಾರಸ್ತಂಭವಾಗಿದ್ದರು. ತಂದೆ ದಿ. ಗಂಗಾಧರ ಆಚಾರ್ಯ, ತಾಯಿ ಶ್ರೀಮತಿ ನಾಗವೇಣಿ, ಸಹೋದರ ನವರಾಜ್, ಸಹೋದರಿ ಪೂಜಾಶ್ರೀ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.