ವಿಜಯ ಗ್ರಾಮಾಭಿವೃದ್ಧಿ ಜಾಲ್ಸೂರು ಸಮಿತಿಯ ಉದ್ಘಾಟನೆ ಹಾಗೂ ತಾರಸಿ ಕೃಷಿ, ಕೈತೋಟ ರಚನೆ ಬಗ್ಗೆ ಮಾಹಿತಿ ಕಾರ್ಯಕ್ರಮ

Advt_Headding_Middle
Advt_Headding_Middle

 

ವಿಜಯ ಬ್ಯಾಂಕ್ ಪ್ರವರ್ತಿತ ವಿಜಯ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಜಾಲ್ಸೂರಿನಲ್ಲಿ ನೂತನವಾಗಿ ರಚನೆಗೊಂಡ ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಉದ್ಘಾಟನೆ ಹಾಗೂ ತಾರಸಿ ಕೃಷಿ, ಕೈತೋಟ ರಚನೆ ಬಗ್ಗೆ ಮಾಹಿತಿ ಕಾರ್ಯಕ್ರಮ ಅ. ೧೧ರಂದು ಜಾಲ್ಸೂರು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

 

ಸುದ್ದಿ ಬಿಡುಗಡೆ ವಾರಪತ್ರಿಕೆಯ ಸಂಪಾದಕರಾದ ಡಾ. ಯು.ಪಿ. ಶಿವಾನಂದರು ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನ ಸಮಿತಿಗೆ ಶುಭ ಹಾರೈಸಿದರು. ವಿ.ಆರ್.ಡಿ.ಎಫ್.ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಸದಾಶಿವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಕಡಮಜಲು ಸುಭಾಶ್ ರೈ,ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು ಕರ್ನಾಟಕ ಅರೆಭಾಷೆ ಅಕಾಡೆಮಿ ಸದಸ್ಯ ದಿನೇಶ್ ಹಾಲೆಮಜಲು, ಪ್ರಗತಿಪರ ಕೃಷಿಕ ಜೆ.ಕೆ.ವಸಂತ ಗೌಡ ಉರ್ವ ಉಪಸ್ಥಿತರಿದ್ದರು.

 

ಈ ಸಂದರ್ಭದಲ್ಲಿ ತಾರಸಿ ಕೃಷಿಕ ಡಾ. ಕೃಷ್ಣಪ್ಪ ಗೌಡ ಪಡ್ಡಂಬೈಲುರವರನ್ನು ಸನ್ಮಾನಿಸಲಾಯಿತು. ವಿಜಯ ಗ್ರಾಮಾಭಿವೃದ್ಧಿಯ ಜಾಲ್ಸೂರು ಸಮಿತಿಯ ನೂತನ ಅಧ್ಯಕ್ಷ ಯಶ್ವಿತ್ ಕಾಳಂಮನೆ ಸ್ವಾಗತಿಸಿ, ತಿರುಮಲೇಶ್ವರಿ ಜಾಲ್ಸೂರು ವಂದಿಸಿದರು. ಸದಸ್ಯೆ ಹೇಮಲತಾ ಗಣೇಶ್ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು. 

ಉದ್ಘಾಟನೆಯ ನಂತರ ತಾರಸಿ ಕೃಷಿ ಹಾಗೂ ಕೈತೋಟ ರಚನೆಯ ಬಗ್ಗೆ ಸಂಪನ್ಮೂಲ ವ್ಯಕ್ತಿ ಡಾ. ಕೃಷ್ಣಪ್ಪ ಗೌಡ ಪಡ್ಡಂಬೈಲುರವರಿಂದ ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.