ಗೂನಡ್ಕ : ಸುನ್ನೀ ಯುವಜನ ಸಂಘ- ಸುನ್ನೀ ಸ್ಟೂಡೆಂಟ್ ಫೆಡರೇಶನ್ ಸಾಂತ್ವಾನ ಯೋಜನೆಯ ವತಿಯಿಂದ ಮನೆಯ ಶಿಲಾನ್ಯಾಸ

Advt_Headding_Middle
Advt_Headding_Middle

ಗೂನಡ್ಕ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ- ಸುನ್ನೀ ಸ್ಟೂಡೆಂಟ್ ಫೆಡರೇಶನ್ (SYS-SSF) ಸಾಂತ್ವಾನ ಯೋಜನೆಯ ವತಿಯಿಂದ ಅನಾಥ ಕುಟುಂಬಕ್ಕೆ ನಿರ್ಮಿಸಿ ಕೊಡಲು ಉದ್ದೇಶಿದ ಮನೆಯ ಶಿಲಾನ್ಯಾಸ ಕಾರ್ಯಕ್ರಮವು  ಬಹು: ಅಸಯ್ಯದ್ ಅಶ್ರಪ್ ತಂಙಳ್ ಮಂಞಂಪಾರೆ ಇವರು ನೆರವೇರಿಸಿದರು.

ನಂತರ ನಡೆದ ಸಬಾ ಕಾರ್ಯಕ್ರಮ ವನ್ನು ಸುಳ್ಯ ಕೆ ವಿ ಜಿ ಆಯುರ್ವೇದ ಮಹಾವಿದ್ಯಾಲಯದ ಆಡಳಿತಾದಿಕಾರಿ ಡಾ: ಡಿ ವಿ ಲೀಲಾದರ್ ಉದ್ದೇಶಿತ ಮನೆಯ ನೀಲಿ ನಕಾಸೆಯನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಿದರು.

ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ತಂಙಳ್ ರವರು. ಸುನ್ನೀ ಸಂಘ ಕುಟುಂಬದ ಸಾಂತ್ವಾನ ಯೋಜನೆಯ ಈ ಕಾರ್ಯಕ್ರಮದಲ್ಲಿ ಜಾತ್ಯತೀತವಾಗಿ ವಿವಿಧ ಸಂಘಟನೆಗಳ ನೇತಾರರು ರಾಜಕೀಯ ನಾಯಕರು ಸಮಾಜ ಸೇವಕರು ಭಾಗವಹಿಸಿರುವುದು ಬಹಳ ಶ್ಲಾಘನೀಯವಾಗಿದೆ ಇದೊಂದು ಸೌಹಾರ್ದತೆಯ ಸಕೇತ ಕೂಡಾ ಎಂದರಲ್ಲದೆ ಸಂಕಷ್ಟದಲ್ಲಿರುವವರನ್ನು ಗುರುತಿಸಿ ನೆರವಾಗುವ ಸದ್ಗುಣ ಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಕರೆ ನಿಡಿದರು ಅಲ್ಲದೇ ಉದ್ದೇಶಿತ ಮನೆಗೆ ದಾರುಲ್ ಖೈರ್ ಎಂದು ನಾಮಕರಣ ವನ್ನು ಘೋಷಣೆ ಮಾಡಿದರು.
 

 

ಅದ್ಯಕ್ಷತೆಯನ್ನು ಸಾಂತ್ವಾನ ಸಮಿತಿ ಚೇರ್ಮಾನ್ ಎಸ್ ಎಮ್ ಅಬ್ದುಲ್ಲಾ ವಹಿಸಿದರು.
ಮುಖ್ಯ ಅಥಿತಿ ಗಳಾಗಿ ಹಾಜಿ ಪಿ ಎ ಅಬ್ದುಲ್ಲಾ ,  ಸೋಮಶೇಖರ್ ಕೊಯಿಂಗಾಜೆ, ಹಮೀದ್ ಸುಣ್ಣಮೂಲೆ, ಮೇದಪ್ಪ ಗೌಡ ಉಳುವಾರು, ತಾಜ್ ಮಹಮ್ಮದ್ ಸಂಪಾಜೆ, ರಾಮಚಂದ್ರ ಕಲ್ಲಗೆದ್ದೆ, ಕೆ ಪಿ ಜೋನಿ, ಪಿ ಎನ್ ಗಣಪತಿ ಭಟ್, ಯು ಬಿ ಚಕ್ರಪಾಣಿ, ರಹೀಂ ಬಿಜದಕಟ್ಟೆ, ಹಮೀದ್ ಬೀಜ ಕೊಚ್ಚಿ, ಮುಹಮ್ಮದ್ ಅಲಿ ಸಖಾಪಿ, ಕೆ ಎಮ್ ಅಶ್ರಪ್ ಕಲ್ಲುಗುಂಡಿ, ನೊಟ್ರಿ, ಅಬುಬಕ್ಕರ್ ಅಡ್ಕಾರ್, ಮೂಸ ಕುಂಞಿ ಪೈಂಬಚಾಲ್, ಇಂಜಿನಿಯರ್ ಇಮ್ತಿಯಾಝ್ ಪಾಷಾ, ಪಿ ಎ ಉಮ್ಮರ್ ಹಾಜಿ, ಹಾಜಿ ಅಬ್ಬಾಸ್ ನ್ಯಾಷನಲ್, ಇಕ್ಬಾಲ್ ಬೀಜದ ಕಟ್ಟಿ, ಅಬೂಬಕ್ಕರ್ ಸಿದ್ದೀಖ್ ಕಟ್ಟೆಕಾರ್ಸ್ ಪಾಲ್ಗೊಂಡಿದ್ದರು
  ಮಹಮ್ಮದ್ ಕುಂಞಿ ಗೂನಡ್ಕ ರವರು ಸ್ವಾಗತಿಸಿ, ಅಬ್ದುಲ್ ಲತೀಪ್ ಸಖಾಪಿ ಗೂನಡ್ಕ ವಂದಿಸಿದರು. ಪಿ ಕೆ ಅಬೂಶಾಲಿ ನಿರೂಪಿಸಿರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.