ಪಂಜ ಲಯನ್ಸ್ ಕ್ಲಬ್ ವಲಯಾಧ್ಯಕ್ಷರ ಭೇಟಿ

Advt_Headding_Middle
Advt_Headding_Middle

ಪಂಜ ಲಯನ್ಸ್ ಕ್ಲಬ್‌ಗೆ ರೀಜನ್ 7ರ ವಲಯ ೨ರ ವಲಯಾಧ್ಯಕ್ಷ  ಅರವಿಂದ ಭಗವಾನ್ ರೈ ಇವರು ಅಧಿಕೃತವಾಗಿ ಭೇಟಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜ ಲಯನ್ಸ್ ಕ್ಲಬ್‌ನ ಅಧ್ಯಕ್ಷ  ತುಕಾರಾಮ ಎನೆಕಲ್ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂತ್ಯ ೭ರ ಅಧ್ಯಕ್ಷ  ಜಾಕೆ ಮಾಧವ ಗೌಡ, ಜಾಲ್ಸೂರು ಕ್ಲಬ್‌ನ ಅಧ್ಯಕ್ಷ  ದಿವಾಕರ ರೈ, ವಿಟ್ಲ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ  ಜಯಾ ವಿ.ರೈ , ನಿಟಕಪೂರ್ವಧ್ಯಕ್ಷ,  ಬಾಲಕೃಷ್ಣ ಮೂಲೆಮನೆ, ಕೋಶಾಧಿಕಾರಿ  ಸುಚಿನ್ನ ಕಾಣಿಕೆ, ಕಾರ್ಯದರ್ಶಿ ಮಹಾಬಲ ಕುಳ ಉಪಸ್ಥಿತರಿದ್ಧರು. ಜಿಲ್ಲಾ ರಾಜ್ಯಪಾಲರ ಈ ವರ್ಷದ ಖಾರ್ಯಕ್ರಮ ಕೃಷಿ ಇದರ ಅಡಿಯಲ್ಲಿ ಪಂಬೆತ್ತಾಡಿ ಗ್ರಾಮದ ಪ್ರಗತಿಪರ ಹೈನುಗಾರಿಕೆ ಕೃಷಿಕೆ ಶ್ರೀಮತಿ ಪೂವಮ್ಮ ಭೀಮಗುಳಿ ಮತ್ತು ಕಲ್ಮಡ್ಕ ಗ್ರಾಮದ ಪ್ರಗತಿಪರ ಹೈನುಗಾರ ವೆಂಕಪ್ಪ ಗೌಡ ದೊರೆ ಮತ್ತು ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತೀರ್ಣರಾದ ವಿದ್ಯಾರ್ಥಿನಿ ಪೂರ್ಣಿಮಾ, ಪ್ರತಿಭಾನ್ವಿತ ವಿದ್ಯಾರ್ಥಿ ಅಭಿಜ್ಞಾ ಪಳಂಗಾಯ ಇವರನ್ನು ಸನ್ಮಾನಿಸಲಾಯಿತು.


ಸಮಾರಂಭದ ಕೇಂದ್ರ ಬಿಂದು  ಅರವಿಂದ ಭಗವಾನ್ ರೈ ಇವರನ್ನು  ಜಾಕೆ ಮಾಧವ ಗೌಡ ಸನ್ಮಾನಿಸಿದರು. ಜಿಲ್ಲೆಯ  ಗೀತಾಪ್ರಕಾಶ್, ಜಿಎಲ್‌ಟಿ ಸಂಯೋಜಕರು  ವಸಂತ ಕುಮಾರ್ ಶೆಟ್ಟಿ, ಜಿ.ಆರ್.ಆರ್  ಮೆಲ್ವಿನ್ ಶುಭ ಹಾರೈಸಿದರು.  ರಾಜೇಶ್ ರೈ ಅತಿಥಿಗಳನ್ನು ವೇದಿಕೆಗೆ ಅಹ್ವಾನಿಸಿದರು. 

ಶಶಿಧರ ಪಳಂಗಾಯ ಅತಿಥಿಗಳನ್ನು ಪರಿಚಯಿಸಿದರು.  ಸಂತೋಷ್ ಜಾಕೆ ಪ್ರಾರ್ಥಿಸಿ,  ಸುರೇಶ್ ನಡ್ಕ ಸನ್ಮಾನ ಕಾರ್ಯಕ್ರಮವನ್ನು ನಿರೂಪಿಸಿದರು, | ನೇಮಿರಾಜ್ ಪಲ್ಲೋಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.