ಜೋಡುಪಾಲದಲ್ಲಿ ಸಂತ್ರಸ್ತರ ಪ್ರಾಣ ರಕ್ಷಿಸಿದ ಭಜರಂಗದಳದ ನಾಲ್ವರು ಯುವಕರಿಗೆ ಸಚಿವ ಝಮೀರ್ ಅಹ್ಮದ್ ತಲಾ 1 ಲಕ್ಷ ಕೊಡುಗೆ

Advt_Headding_Middle
Advt_Headding_Middle


ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದ ವೇಳೆ ಜೋಡುಪಾಲದಲ್ಲಿ ಭಜರಂಗದಳ ಮತ್ತು ಎಸ್‌ಕೆಎಸ್‌ಎಸ್‌ಎಫ್ ತಂಡದ ಕಾರ್ಯಕರ್ತರು ನೂರಾರು ಮಂದಿಯನ್ನು ರಕ್ಷಿಸಿದ್ದು, ಈ ಪೈಕಿ ಭಜರಂಗದಳದ ನಾಲ್ವರಿಗೆ ಸಚಿವ ಜಮೀರ್ ಅಹ್ಮದ್ ತಲಾ ೧ ಲಕ್ಷ ಧನಸಹಾಯ ಮಾಡಿದ್ದಾರೆ.

ತಂಡದ ಇತರ  12  ಮಂದಿ ಯುವಕರಿಗೆ ಇತ್ತೀಚೆಗೆ ಮಡಿಕೇರಿಗೆ ಭೇಟಿ ನೀಡಿದ್ದ ಸಂದರ್ಭ ಉಮ್ರಾ ಬೇಟಿಯ ವೆಚ್ಚವನ್ನು ಭರಿಸುವ ಭರವಸೆ ಸಚಿವ ಝಮೀರ್ ಅಹ್ಮದ್ ನೀಡಿದ್ದರು.


ಅ. 10ರಂದು ಮಂಗಳೂರಿನ ಕುಡುಪು ಬಳಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಜಾಗದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖಾ ಕಚೇರಿಗಳ ಸಂಕೀರ್ಣದ ಮಾಪನ ಭವನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್‌ರವರು ಭಜರಂಗದಳ ಸಂಘಟನೆಗೆ ಸೇರಿದ ಯುವಕರಾದ ಬಿಪಿನ್ ಕಲ್ಲುಗುಂಡಿ, ಮನೋಹರ ಕಳಮೆ, ವಿಜಯ ನಿಡಿಂಜಿ, ದಿನೇಶ್ ಕಲ್ಲುಗುಂಡಿ ಅವರಿಗೆ ತಲಾ ಒಂದು ಲಕ್ಷ ರೂ. ನಗದನ್ನು ಹಸ್ತಾಂತರಿಸಿದರು.

ಶಾಸಕ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ ಮೊಯ್ಲಿ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕಣಚೂರು ಮೋನು, ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ.ಶಾಹಿದ್ ಸಚಿವರ ಈ ಹೃದಯವಂತಿಕೆಗೆ ಸಾಕ್ಷಿಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.