ಅಡ್ಕಾರು-ಸೋಣಂಗೇರಿ ಗ್ರಾಮ ಅರಣ್ಯ ಸಮಿತಿ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಅಡ್ಕಾರು-ಸೋಣಂಗೇರಿ ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆಯು ಜಾಲ್ಸೂರು ಗ್ರಾಮದ ಅಡ್ಕಾರು ಗ್ರಾಮ ಅರಣ್ಯ ಸಮಿತಿ ಕಛೇರಿಯಲ್ಲಿ ಅ.12 ರಂದು ಜರುಗಿತು.


ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಗಂಗಾಧರ ರೈ ಸೋಣಂಗೇರಿ ಅಧ್ಯಕ್ಷತೆ ವಹಿಸಿದ್ದರು. ಜಾಲ್ಸೂರು ಗ್ರಾ.ಪಂ.ಉಪಾಧ್ಯಕ್ಷ ದಿನೇಶ್ ಅಡ್ಕಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆನೆಗುಂಡಿ ಶಾಖೆಯ ಉಪ ವಲಯಾರಣ್ಯಾಧಿಕಾರಿ ಬಿ.ಟಿ.ಪ್ರಕಾಶ್, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸತೀಶ್ ಕೆಮನಬಳ್ಳಿ, ಗ್ರಾಮ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಎ.ಎಲ್. ಕಾರ್ಯದರ್ಶಿ, ಉಪ ವಲಯಾರಣ್ಯಾಧಿಕಾರಿ ಯೋಗೀಶ್ ಉಪಸ್ಥಿತರಿದ್ದರು. ಉಪ ವಲಯಾರಣ್ಯಾಧಿಕಾರಿ ಯೋಗೀಶ್ ಅವರು ವಾರ್ಷಿಕ ವರದಿ ವಾಚಿಸಿದರು. ಗ್ರಾಮ ಅರಣ್ಯ ಸಮಿತಿಗೆ ಒಳಪಡುವ ಸ್ವಸಹಾಯ ಸಂಘದ ಕಾರ್ಯದರ್ಶಿಗಳು ಸಂಘದ ವಾರ್ಷಿಕ ವರದಿ ವಾಚಿಸಿದರು. ಅರಣ್ಯ ರಕ್ಷಕ ದಿನೇಶ್ ದೇವಾಡಿಗ ಸ್ವಾಗತಿಸಿ, ಉಪ ವಲಯಾರಣ್ಯಾಧಿಕಾರಿ ಯೋಗೀಶ್ ವಂದಿಸಿದರು. ಅರಣ್ಯ ರಕ್ಷಕ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಅಡ್ಕಾರು-ಸೋಣಂಗೇರಿ ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.