Breaking News

ಜೀವನ್ ರಾಂ ನಿರ್ದೇಶನದ ೨ ನಾಟಕಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Advt_Headding_Middle
Advt_Headding_Middle

ತಿರುಪತಿಯ ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ಭಾರತ ಅಂತರ್ ವಿ.ವಿ.ಯುವಜನೋತ್ವದಲ್ಲಿ ,ರಂಗನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶಿಸಿದ ಆಳ್ವಾಸ್ ಕಾಲೇಜು ಮೂಡುಬಿದ್ರೆ ವಿದ್ಯಾರ್ಥಿಗಳು ಅಭಿನಯಿಸಿದ ಎರಡು ನಾಟಕಗಳು ಅತ್ಯತ್ತಮ ರಂಗ ಪ್ರಶಸ್ತಿ ಗಳಿಸಿ ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ ಆಳ್ವಾಸ್ ರಂಗ ತಂಡದ ’ ದೂತವಾಕ್ಯ ’ಏಕಾಂಕ ನಾಟಕವು ದಕ್ಷಿಣ ಭಾರತದ ೧೪ ವಿ.ವಿ.ಗಳೊಂದಿಗೆ ಮತ್ತು ಕಿರುನಾಟಕ “ಅಭಿವೃದ್ಧಿ ?” ಯು ೨೨ ವಿ.ವಿ.ತಂಡದೊಂದಿಗೆ ಸ್ಪರ್ಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಈ ಮೊದಲು ಮಂಗಳೂರು ವಿ.ವಿ,ರಾಜೀವಗಾಂಧಿ ವಿ.ವಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯನ್ನು ಪ್ರತಿನಿಧಿಸಿದ ಆಳ್ವಾಸ್ ಗೆ ಜೀವನ್ ರಾಂ ನಿರ್ದೇಶಿಸಿದ ಏಕಾದಶಾನನ,ಬರ್ಬರೀಕ,ಮಧ್ಯಮ ವ್ಯಾಯೋಗ,ಊರುಭಂಗ,ದೂತವಾಕ್ಯ,ಬಿಡುಗಡೆಯ ಕನಸಿನಲ್ಲಿ,ದೇವವೃದ್ಧರು- ಮೊದಲಾದ ನಾಟಕಗಳು ೧೧ ಬಾರಿ ದಕ್ಷಿಣ ವಲಯ ಮತ್ತು ೧೦ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದದ್ದು ಮಾತ್ರವಲ್ಲ ಈ ನಾಟಕಗಳು ಸತತ ೯ ಬಾರಿ ರಾಷ್ಟ್ರೀಯ ರಂಗ ಪ್ರಶಸ್ತಿಯನ್ನೂ ಪಡೆದಿರುವುದು ಗಮನಾರ್ಹ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.