ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆ ಶೆಡ್ ಲೋಕಾರ್ಪಣೆ

Advt_Headding_Middle
Advt_Headding_Middle

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆಗೆ ಉಳಿದುಕೊಳ್ಳಲು ಸೂಕ್ತ ಮನೆ, ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸೇವೆ ನಡೆಸುವಾಗ ಗೋಪೂಜೆಗೆ ಮಂದಿರ ಇವೆರಡನ್ನೂ ಸೆ.೧೨ ರಂದು ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಲೋಕಾರ್ಪಣೆ ಮಾಡಿದರು.
ದೇವಸ್ಥಾನದ ವತಿಯಿಂದ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗಶಾಲೆ ಬಳಿ ೮.೪೦ಲಕ್ಷ ರೂ ವೆಚ್ಚದ ಗೋಪೂಜಾ ಮಂದಿರ ಹಾಗೂ ದೇಗುಲದ ಆನೆಗೆ ಇಂಜಾಡಿ ಬಳಿ ೨೪.೫೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಶೆಡ್ ಉದ್ಘಾಟಿಸಿ, ಮುಂದಿನ ದಿನಗಳಲ್ಲಿ ಆನೆ ಶೆಡ್ ಬಳಿ ಮಾವುತರಿಗೆ ತಂಗಲು ಕೊಠಡಿ, ನೀರಿನ ಕೊಳ ಇತ್ಯಾದಿಗಳನ್ನು ನಿರ್ಮಿಸಿ ಪರಿಸರವನ್ನು ಉದ್ಯಾನವನ್ನಾಗಿಸುವುದು ಗುರಿಯಾಗಿದೆ ಎಂದವರು ತಿಳಿಸಿದರು.
ಗೋಶಾಲೆ ಮಂದಿರ ಉದ್ಘಾಟನೆ ವೇಳೆ ದೇಗುಲದ ಅರ್ಚಕ ಮಧುಸೂದನ ಕಲ್ಲೂರಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರೆ, ಆನೆ ಶೇಡ್ ಉದ್ಘಾಟನೆ ವೇಳೆ ವಾಸುದೇವ ರಾವ್ ವೈದಿಕ ವಿದಿವಿಧಾನ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು ಇದೇ ವೇಳೆ ಆದಿಸುಬ್ರಹ್ಮಣ್ಯ ಬಳಿಯಿಂದ ಪುರುಷರಾಯ ಬೆಟ್ಟಕ್ಕೆ ತೆರಳುವ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ದೇಗುಲದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ಮಾಧವ.ಡಿ, ರಾಜೀವಿ ಆರ್.ರೈ, ದಮಯಂತಿ ಕೂಜುಗೋಡು, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವರಾಮ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ದೇಗುಲದ ಅಭಿಯಂತರ ಉದಯ ಕುಮಾರ್, ಹೆಬ್ಬಾರ್ ಷಣ್ಮುಖ ಉಪರ್ಣ, ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್.ಶೆಟ್ಟಿಗಾರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲರಂಗಯ್‌ಎಲ್ಲದಕ್ಕೂ ತ್ಯಾಗರಾಜ್, ಎಸ್, ಸತೀಶ್ ಕೂಜುಗೋಡು, ಗ್ರಾ.ಪಂ ಸದಸ್ಯ ರಾಜೇಶ್ ಎನ್ ಎಸ್. ನಿತಿನ್ ಭಟ್, ರೋಹಿತ್ ಗುತ್ತಿಗೆದಾರರಾದ ಕೃಷ್ಣಕುಮಾರ್ ಬಾಳುಗೋಡು, ಗಿರೀಶ್ ಮೆದು, ಆನೆಮಾವುತರಾದ ಶ್ರೀನಿವಾಸ್, ಗುರುಪ್ರಸಾದ್, ಶಿವಪ್ರಸಾದ್ ಹಾಗೂ ದೇಗುಲದ ಸಿಬಂದಿ ಸುಬ್ಬಣ್ಣ ಸಹಿತ ಇತರೆ ಸಿಬಂದಿಗಳು, ಭಕ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.