Breaking News

ಸುಬ್ರಹ್ಮಣ್ಯ ವಲಯ ಜಾತ್ಯಾತೀತ ಜನಾತದಳದ ಕಾರ್ಯಕರ್ತರ ಸಭೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯ ವಲಯ ಜಾತ್ಯಾತೀತ ಜನತಾದಳದ ಕಾರ್ಯಕರ್ತರ ಸಭೆ ಅ.7 ರಂದು ವೆಲಂಕಣಿ ಸಭಾಭವನದಲ್ಲಿ ನಡೆಯಿತು.
ರಾಜ್ಯ ಜೆಡಿಎಸ್ ಕಾರ್ಯದರ್ಶಿ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ ದುರ್ಬಲರಿಗೆ ಮತ್ತು ಕೃಷಿಕರಿಗೆ ನ್ಯಾಯ ಕೊಟ್ಟ ಪಕ್ಷವಿದ್ದರೆ ಅದು ಜೆಡಿಎಸ್ ಪಕ್ಷ ಎಂದು ಅವರು ಹೇಳಿದರು.


ಡಾ. ಕಸ್ತೂರಿ ರಂಗನ್ ಜಾರಿ ವಿಚಾರದಲ್ಲಿ ರೈತರ ಪರವಾದ ನಿಲುವನ್ನು ಮುಖ್ಯಮಂತ್ರಿಗಳು ಕೈಗೊಂಡಿದ್ದರು, ಇದಕ್ಕೆ ಸಂಬಂದಿಸಿ ಸುಪ್ರಿಂಕೋರ್ಟಿನಲ್ಲಿ ಅಪಿದವತ್ ಕೂಡ ಸಲ್ಲಿಸಿದೆ. ರೈತರಿಗೆ ಅನ್ಯಾಯವಾಗಲು ಯಾವತ್ತೂ ಜೆಡಿಎಸ್ ಬಿಡುವುದಿಲ್ಲ , ಬಡವರಿಗಾಗಿ ಜಾರಿಗೆ ಬಂದ. ೯೪ಸಿ ಯೋಜನೆ ಸೌಲಭ್ಯ ಮಂಜೂರಾತಿ ವೇಳೆ ಲಂಚಕ್ಕಾಗಿ ಕಡತವನ್ನು ಬಾಕಿ ಇರಿಸಿಕೊಂಡಲ್ಲಿ ಪಕ್ಷದ ನಾಯಕರ ಗಮನಕ್ಕೆ ತನ್ನಿ ಅಂತ ಅಧಿಕಾರಿಗಳನ್ನು ಅಮಾನತುಗೊಳಿಸಿ, ಮುಂದೆ ನಾವೇ ನಿಂತು ಕೆಲಸ ಮಾಡಿಕೊಡುತ್ತೇವೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ ತಿಳಿಸಿದರು.

ವೇದಿಕೆಯಲ್ಲಿ ಸುಳ್ಯ ತಾ| ಜೆಡಿಎಸ್ ಅಧ್ಯಕ್ಷ ದಯಾಕರ ಆಳ್ವ, ಸುಳ್ಯ ವಿಧಾನ ಸಭಾ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ, ಸುಳ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಜೆಡಿಎಸ್‌ನ ವಿವಿಧ ವಿಭಾಗಗಳ ನಾಯಕರಾದ ರೋಸಿ ವಿಕ್ತರ್, ಹರಿಪ್ರಸಾದ್ ಯು ಜೆ, ಫಾರೂಕ್, ವಿಕ್ಟರ್ ಮಾರ್ಟಿನ್, ಚಂದ್ರಶೇಖರ ಗೌಡ ಕೋಡಿಂಬಾಳ, ಪ್ರವೀಣ್ ಮುಂಡೋಡಿ ಮೊದಲಾದವರು ಉಪಸ್ಥಿತರಿದ್ದರು. ಡಾ, ತಿಲಕ್ ಎ,ಎ ಸ್ವಾಗತಿಸಿ, ದುಗ್ಗಪ್ಪ ಅಗ್ರಹಾರ ವಂದಿಸಿದರು, ನಾರಾಯಣ ಅಗ್ರಹಾರ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.