ಪೈಲಾರು ಅಮರ ಕಪ್ 2018 ಕಬಡ್ಡಿ ಪಂದ್ಯಾಟ

Advt_Headding_Middle
Advt_Headding_Middle

ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮದ ಅಮರ ಕ್ರೀಡಾ ಸಂಘಟನೆಯ ಆಶ್ರಯದಲ್ಲಿ ಅ. ೧೩ ಮತ್ತು ೧೪ರಂದು ದ.ಕ.ಜಿ.ಪ.ಹಿ.ಪ್ರಾ.ಶಾಲೆ ಪೈಲಾರು ಇದರ ಮೈದಾನದಲ್ಲಿ ತಾಲೂಕು ಮಟ್ಟದ ಆಹ್ವಾನಿತ ಪ.ಪೂ.ಕಾಲೇಜುಗಳ ಮತ್ತು ಕೆ.ಎಫ್.ಡಿ.ಸಿ. ವ್ಯಾಪ್ತಿಯ ೮ ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ ಅಮರ ಕಪ್ ೨೦೧೮ ಪ್ರಾರಂಭಗೊಂಡಿತು.

ಪಂದ್ಯಾಟದ ಉದ್ಘಾಟನೆಯನ್ನು ರೊ. ಜಿತೇಂದ್ರ ಎನ್.ಎ.ನೆರವೇರಿಸಿದರು. ಸೊಸೈಟಿ ಅಧ್ಯಕ್ಷ ಸದಾಶಿವ ಗೌಡ ಮೂಕಮಲೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರೊ.ಪ.ಕಾಲೇಜಿನ ಪ್ರಾಶುಪಾಲೆ ಶೋಭಾ ಬೊಮ್ಮೆಟ್ಟಿ, ಕೆವಿಜಿಎಂಸಿಎಚ್ ಇ.ಒ. ಮಹೇಶ್ ಮೇರ್ಕಜೆ, ರಾಜ್ಯಮಟ್ಟದ ಕಬಡ್ಡಿ ಆಟಗಾರ ಲೋಕೇಶ್ ಕಾನಡ್ಕ, ಗ್ರಾಮ ಪೊಲೀಸ್ ಮೋಹನ್ ತೋಟಚಾವಡಿ, ಪ್ರಗತಿಪರ ಕೃಷಿಕ ಜಯಶಿವ ಮಡಪ್ಪಾಡಿ, ಪೈಲಾರು ಮಿತ್ರವೃಂದದ ಅಧ್ಯಕ್ಷ ಜಯಂತ ನಾಯರ್‌ಕಲ್ಲು, ಶ್ರೀನಿಧಿ ಶಾಮಿಯಾನ ಮಾಲಕ ಜಯಪ್ರಕಾಶ್ ದೊಡ್ಡಿಹಿತ್ಲು, ಗರುಡ ಯು.ಮಂ. ಅಧ್ಯಕ್ಷ ಸತೀಶ್ ಪಿಲಿಕಜೆ ಉಪಸ್ಥಿತರಿದ್ದರು. ಹರ್ಷಿತ್ ದಾತಡ್ಕ ಸ್ವಾಗತಿಸಿ, ಪ್ರದೀಪ್ ಬೊಳ್ಳೂರು ವಂದಿಸಿದರು. ವಿಖ್ಯಾತ್ ಬಾರ್ಪಣೆ, ತೀರ್ಥೇಶ್ ನಾರ್ಣಕಜೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.