ಕೆ.ಎಸ್.ಎಸ್ ಕಾಲೇಜಿನಲ್ಲಿ ಮಾಹಿತಿ ಹಕ್ಕು ಮತ್ತು ಸಕಾಲ ಕುರಿತು ಮಾಹಿತಿ ಕಾರ್ಯಾಗಾರ

Advt_Headding_Middle
Advt_Headding_Middle

ವಿದ್ಯಾರ್ಥಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಅರಿವಿರಬೇಕು

ವಿದ್ಯಾರ್ಥಿಗಳು ಜನರ ಭವಿಷ್ಯದ ದಾರಿದೀಪ. ಹೀಗಾಗಿ ಭ್ರಷ್ಟಚಾರ ರಹಿತ ಸಮಾಜ ನಿರ್ಮಾಣ ಜವಾಬ್ದಾರಿ ನಿಮ್ಮ ಮೇಲೆ ಇದೆ. ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಕಾನೂನು ಚೌಕಟ್ಟಿನ ಒಳಗೆ ಹೋರಾಟ ನಡೆಸಬೇಕು ಅಂತಹ ಕಾರ್ಯ ನಡೆಸಬೇಕಿದ್ದರೆ ಮಾಹಿತಿ ಹಕ್ಕು ಕಾಯ್ದೆ ಕುರಿತು ತಿಳುವಳಿಕೆ ಹೊಂದಿರಬೇಕು ಎಂದು ಆರ್‌ಟಿಐ ಕಾರ್ಯಕರ್ತ ದಿನೇಶ್ ಭಟ್ ಪುತ್ತೂರು ಹೇಳಿದರು.

ಅವರು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ನಾಲ್ಕೂರು, ಸುಬ್ರಹ್ಮಣ್ಯ ವಲಯ ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇವುಗಳ ಆಶ್ರಯದಲ್ಲಿ ಮಾಹಿತಿ ಹಕ್ಕು ಕಾಯ್ದೆ, ೨೦೦೫ ಮತ್ತು ಸಕಾಲ ಯೋಜನೆ ಕುರಿತು ಕೆಎಸ್‌ಎಸ್ ಕಾಲೇಜಿನಲ್ಲಿ ಅ.11 ರಂದು ನಡೆದ ಮಾಹಿತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಕೆ.ಎಸ್.ಎಸ್ ಕಾಲೇಜು ಪ್ರಾಂಶುಪಾಲ ಪ್ರೋ ರಂಗಯ್ಯ ಶೆಟ್ಟಿಗಾರ್ ಕಾರ್ಯಗಾರ ಉದ್ಘಾಟಿಸಿದರು. ಕೃಷಿಕ ಬಾಲಸುಬ್ರಹ್ಮಣ್ಯ ಭಟ್ ಉಜಿರೆ ಸಕಾಲ ಕುರಿತು ಮಾಹಿತಿ ನೀಡಿದರು. ವೃತ್ತಿ ಶಿಕ್ಷಣದ ಕುರಿತು ಪ್ರಕಾಶ್ ಮಾಹಿತಿ ನೀಡಿದರು.

ನಾಲ್ಕೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಉದಯಮಾರ್ ಡಿ ಆರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಜಯ ಗ್ರಾಮೀಣ ಪ್ರತಿಷ್ಠಾನದ ಸಿಇಒ ಸದಾಶಿವ ಆಚಾರ್, ವಿಜಯ ಗ್ರಾಮೀಣ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಸುಭಾಶ್ಚಂದ್ರ ಕಡಮಮಜಲು, ಸುಬ್ರಹ್ಮಣ್ಯ ವಲಯ ಪತ್ರಕರ್ತರ ಸಂಘದ ಪ್ರ.ಕಾರ್ಯದರ್ಶಿ ಬಾಲಕೃಷ್ಣ ಬಿ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಹಾಲೆಮಜಲು ಸ್ವಾಗತಿಸಿ, ವಿಶ್ವನಾಥ ನಡುತೋಟ ವಂದಿಸಿದರು. ಪತ್ರಕರ್ತ ಭರತ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತರಾದ ಮಂಜುನಾಥ ರಾವ್, ಲೊಕೇಶ್ ಬಳ್ಳಡ್ಕ, ಪ್ರಕಾಶ್ ಸುಬ್ರಹ್ಮಣ್ಯ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.