ಪಂಜಿಕಲ್ಲು-ಕನಕಮಜಲು ಅರಣ್ಯ ವೀಕ್ಷಕ ದೇವಪ್ಪ ನಾಯ್ಕರಿಗೆ ವರ್ಗಾವಣೆ

Advt_Headding_Middle
Advt_Headding_Middle

ಪಂಜಿಕಲ್ಲು-ಕನಕಮಜಲು ಕೇಂದ್ರೀಯ ಅರಣ್ಯ ಸಸ್ಯಕ್ಷೇತ್ರದಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವಪ್ಪ ನಾಯ್ಕ ಅವರು ಅರಣ್ಯ ಇಲಾಖೆಯ ಪುತ್ತೂರು ತಾಲೂಕಿನ ಪಾಣಾಜೆ ಶಾಖೆಗೆ ವರ್ಗಾವಣೆಗೊಂಡಿದ್ದಾರೆ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಾಯಿಲಕೊಚ್ಚಿಯವರಾದ ದೇವಪ್ಪ ನಾಯ್ಕರವರು 1986ರಲ್ಲಿ ಕನಕಮಜಲು ರಕ್ಷಿತಾರಣ್ಯದ ಕೋರೆಕ್ಕಾನ ಎಂಬಲ್ಲಿ ನೆಡುತೋಪು ವೀಕ್ಷಕರಾಗಿ ಎರಡು ವರ್ಷ, ಕನಕಮಜಲಿನ ಮುಗೇರು ನೆಡುತೋಪು, ದೇಲಂಪಾಡಿ ನೆಡುತೋಪು ವೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 1988ರಲ್ಲಿ ಪಂಜಿಕಲ್ಲು-ಕನಕಮಜಲು ಕೇಂದ್ರೀಯ ಸಸ್ಯಕ್ಷೇತ್ರದಲ್ಲಿ ವೀಕ್ಷಕರಾಗಿ 2007ರವರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. 2008ರಿಂದ ಕನಕಮಜಲು ರಕ್ಷಿತಾರಣ್ಯದ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 2012ರಲ್ಲಿ ದಿನಗೂಲಿ ನೌಕರರಾಗಿ ಖಾಯಂ ನೇಮಕಗೊಂಡು ಇದೀಗ ಪಾಣಾಜೆ ಶಾಖೆಗೆ ವರ್ಗಾವಣೆಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.