Breaking News

ಸುಳ್ಯ : ಶಾರದಾಂಬಾ ಉತ್ಸವ ಹಾಗೂ ದಸರಾ ಕಾರ್ಯಕ್ರಮಕ್ಕೆ ಚಾಲನೆ

Advt_Headding_Middle
Advt_Headding_Middle

 

ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ೪೭ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಹಾಗೂ ಸುಳ್ಯ ದಸರಾ ಕಾರ್ಯಕ್ರಮಕ್ಕೆ ಅ.೧೯ರಂದು ಚಾಲನೆ ದೊರೆತಿದೆ.
ಬೆಳಗ್ಗೆ ಶ್ರೀ ಶಾರದಾದೇವಿಯ ಮೂರ್ತಿಯನ್ನು ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಸುಳ್ಯ ನಗರದ ಮುಖ್ಯ ಪೇಟೆಯಲ್ಲಿ ಮೆರವಣಿಗೆಯಲ್ಲಿ ತಂದು ದೇವಸ್ಥಾನದ ಮುಂಭಾಗದಲ್ಲಿ ಮಾಡಲಾಗಿರುವ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.

ಅ.೧೯ರಂದು ಆರಂಭಗೊಂಡ ಸುಳ್ಯ ದಸರಾ ೯ ದಿನಗಳ ಕಾಲ ವಿವಿಧ ಸಾಂಸ್ಕೃತಿಕ ವೈವಿದ್ಯತೆಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿ ನೃತ್ಯ ಸಂಗಮ, ತುಳು ನಾಟಕ, ಕನ್ನಡ ನಾಟಕ, ಡ್ಯಾನ್ಸ್ ಡ್ಯಾನ್ಸ್, ಜನಪದ ಶೈಲಿಯ ಕಾರ್ಯಕ್ರಮ, ರಸಮಂಜರಿ ಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರತೀ ದಿನ ವಿವಿಧ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯುವುದು. ಅ.೧೮ರಂದು ಆಯುಧ ಪೂಜೆ. ಅ.೧೯ರಂದು ಮಕ್ಕಳಿಗೆ ಅಕ್ಷರಾಭ್ಯಾಸ, ಅ.೨೦ರಂದು ಮಹಾ ಚಂಡಿಕಾಯಾಗ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅ.೨೧ರಂದು ದಸರಾ ಉತ್ಸವದ ಸಮಾರೋಪ ಸಮಾರಂಭ ನಡೆಯುವುದು. ಅ.೨೨ರಂದು ದೇವಿಯ ಶೋಭಾಯಾತ್ರೆ ನಡೆಯುವುದು.
ಅ.೧೫ರಂದು ಸೋಮವಾರದ ದಿನ ಬೆಳಗ್ಗೆಯಿಂದ ಭಜನಾ ಪರಿಷತ್ ಆಶ್ರಯದಲ್ಲಿ ಭಜನೋತ್ಸವ ನಡೆಯಲಿದೆ. ಬೆಳಗ್ಗೆ ೮ ಗಂಟೆಗೆ ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಭಜಕರ ಮೆರವಣಿಗೆಯೂ ನಡೆಯುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.