Breaking News

ಐವರ್ನಾಡು: ಶ್ರೀ ಶಾರದಾ ಪೂಜಾ ಮಹೋತ್ಸವ

Advt_Headding_Middle
Advt_Headding_Middle


ದಸರಾ ಹಬ್ಬಗಳಿಂದ ಧರ್ಮ ಜಾಗೃತಿ -ರಮಾನಾಥ ರೈ
ನಾಡಹಬ್ಬವಾದ ದಸರಾ ಹಬ್ಬ ಇಂದು ರಾಜ್ಯದ ಎಲ್ಲಾ ಕಡೆಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ವಿಶಿಷ್ಟ ರೀತಿಯಲ್ಲಿ ನಡೆಯುತ್ತಿದೆ.ಯುವಶಕ್ತಿ ಸಂಘದವರು ಕಳೆದ ೧೩ ವರ್ಷಗಳಿಂದ ನಡೆಸಿಕೊಂಡು ಬರುವುವಂತಹ ಶಾರದಾ ಪೂಜಾ ಮಹೋತ್ಸವವು ಯುವಜನರನ್ನು ಒಂದುಗೂಡುವಂತೆ ಮಾಡಿದೆ.ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ವೇದಿಕೆಯಾಗಿದೆ. ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆಗಳಿರುತ್ತದೆ.ಎಲ್ಲರನ್ನು ಒಂದುಗೂಡಿಸುವುದರ ಮುಖಾಂತರ ಹಬ್ಬಗಳನ್ನು ಆಚರಿಸಿಕೊಂಡು ಇತರರ ಧರ್ಮವನ್ನು ದ್ವೇಷಿಸದೆ ನಮ್ಮ ಪ್ರೀತಿಸುವದರೊಂದಿಗೆ ಜನರಲ್ಲಿ ಧರ್ಮದ ಜಾಗೃತಿ ಮೂಡಿಸಬೇಕು ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಅವರು ಅ.೧೩ ರಂದು ಐವರ್ನಾಡು ಯುವಶಕ್ತಿ ಸಂಘ ಸಾರ್ವಜನಿಕ ಸಹಕಾರದೊಂದಿಗೆ ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಡ್ತಿಲ ಪುರೊಷೋತ್ತಮ ಗೌಡ ಸ್ಮಾರಕ ರಂಗಮಂದಿರದಲ್ಲಿ ನಡೆದ ಶ್ರೀ ಶಾರದಾ ಪೂಆಜ ಮಹೋತ್ಸವದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನ್ಯಾಯವಾದಿ ಹಾಗೂ ಯುವಶಕ್ತಿ ಕೇಂದ್ರೀಯ ಸಮಿತಿ ಸ್ಥಾಪಕ ನಿರ್ದೇಶಕರಾದ ಎಂ.ವೆಂಕಪ್ಪ ಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಝೀ ಟಿ.ವಿ ಡ್ರಾಮ ಜ್ಯೂನಿಯರ್ ಖ್ಯಾತಿಯ ಮಾ| ತುಷಾರ್ ಗೌಡರಿಗೆ ಶಾರದಾ ಪೂಜಾ ಮಹೋತ್ಸವ ವತಿಯಿಂದ ಮಾಜಿ.ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈಯವರು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಶುಭಹಾರೈಸಿದರು.
ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾ ಪಟುಗಳಿಗೆ ಬಹುಮಾನ ವಿತರಿಸಲಾಯಿತು.
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಐವರ್ನಾಡು ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮಾಲತಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೊಳ್ಳೂರು,ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಿರಿಜಮ್ಮ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ನಾಗಪ್ಪ ಗೌಡ ಪಾಲೆಪ್ಪಾಡಿ,ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲ,ಅಧ್ಯಕ್ಷ ಪವನ್ ಮಡ್ತಿಲ,ಪ್ರಧಾನ ಕಾರ್ಯದರ್ಶಿ ವಿನಯ ಕೋಂದ್ರಮಜಲು ಉಪಸ್ಥಿತರಿದ್ದರು.
ದಿನೇಶ್ ಮಡ್ತಿಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜನ್ ಪರ್ಲಿಕಜೆ,ಪ್ರದೀಪ್ ಕೊಲ ಹಾಗೂ ಶ್ರೀಮತಿ ಚಂಚಲಾಕ್ಷಿ ಕತ್ಲಡ್ಕ ಕಾರ್ಯಕ್ರಮ ನಿರೂಪಿಸಿ, ವಿನಯ ಕೋಂದ್ರಮಜಲು ವಂದಿಸಿದರು.ಯುವಶಕ್ತಿ ಸಂಘದ ಎಲ್ಲಾ ಸದಸ್ಯರು ಸಹಕಾರ ನೀಡಿದರು.

.

ಅ,೧೩ ರಂದು ಬೆಳಿಗ್ಗೆ ಪುತ್ತಿಲ ಗಿರೀಶ್ ಅಸ್ರಣ್ಣರವರ ನೇತೃತ್ವದಲ್ಲಿ ಗಣಹೋಮ ಮತ್ತು ಶ್ರೀ ಶಾರಾದಾ ದೇವಿಯ ಪ್ರತಿಷ್ಟಾಪನೆ ನಡೆಯಿತು.
ಗ್ರಾಮಸ್ಥರಿಗೆ ವಿವಿಧ ರೀತಿಯ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಸಂಜೆ ಪ್ರಾಥಮಿಕ ಶಾಲಾ ಮಕ್ಕಳ ಹಾಗೂ ಅಂಗನವಾಡಿ ಮಕ್ಕಳ ಡ್ಯಾನ್ಸ್ ನಂತರ ಫ್ಯೂಷನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ತಂಡದಿಂದ ಡ್ಯಾನ್ಸ್ ಡ್ಯಾನ್ಸ್ ನಡೆಯಿತು. ನಂತರ ರಂಗಮಯೂರಿ ಕಲಾ ಶಾಲೆ ಸುಳ್ಯ ಪ್ರಸ್ತುತ ಪಡಿಸುವ ಅರೆಭಾಷೆ ನಾಟಕ ಮಾಯಕ ನಂತರ ಯುವಶಕ್ತಿ ಸದಸ್ಯರಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು.
ಅ.೧೪ ರಂದು ಬೆಳಿಗ್ಗೆ ಯುವಶಕ್ತಿ ಸದಸ್ಯರಿಂದ ಮತ್ತು ಶಾಲಾ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. “ಅಕ್ಷರಾಭ್ಯಾಸ” “ಆಯುಧ ಪೂಜೆ.” ನಡೆಯಿತು. ಮದ್ಯಾಹ್ನ ೧೨.೩೦ ರಿಂದ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಅಪರಾಹ್ನ ೨.೩೦ ರಿಂದ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ಐವರ್ನಾಡಿನ ಮುಖ್ಯರಸ್ತೆಯಲ್ಲಿ ಸಾಗಿ ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನಾ ನಡೆಯಿತು. ನೂರಾರು ಜನ ಭಕ್ತಾಭಿಮಾನಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.