Breaking News

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಎನ್.ಎಸ್.ಎಸ್. ಮತ್ತು ಯೂತ್ ರೆಡ್‌ಕ್ರಾಸ್ ಘಟಕಗಳ ಉದ್ಘಾಟನೆ ಮತ್ತು ಕಾರ್ಯಾಗಾರ

Advt_Headding_Middle
Advt_Headding_Middle

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು, ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನೆ ಮತ್ತು ಕಾರ್ಯಾಗಾರ ಅ9 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಎನ್.ಎಸ್.ಎಸ್‌ನ ಹಿರಿಯ ಅಧಿಕಾರಿ ಪ್ರೊ. ಸಂಜೀವ ಕುದ್ಪಾಜೆ, ನೆಹರೂ ಮಹಾವಿದ್ಯಾಲಯ, ಸುಳ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಎನ್.ಎಸ್.ಎಸ್. ಮತ್ತು ಯೂತ್ ರೆಡ್‌ಕ್ರಾಸ್‌ನ ಮೂಲ ಉದ್ದೇಶ ಹಾಗು ಕರ್ತವ್ಯದ ಬಗ್ಗೆ ಸ್ವಯಂ ಸೇವಕರಿಗೆ ಮನದಟ್ಟು ಮಾಡಿಕೊಟ್ಟರು. ಶ್ರೀ ಆದಿತ್ಯರಮಣ ಪ್ರಾರ್ಥಿಸಿದರು. ಶ್ರೀ ಅನಘ ಭಟ್ ಪಿ.ಬಿ. ಎಲ್ಲರನ್ನು ಸ್ವಾಗತಿಸಿದರು. ಶ್ರೀ ನಾಗೇಶ್ ಕೆ, ಆಡಳಿತಾಧಿಕಾರಿ ಎನ್.ಎಸ್.ಎಸ್. ಮತ್ತು ಯೂತ್ ರೆಡ್ ಕ್ರಾಸ್‌ನ ಸಲಹಾ ಸಮಿತಿಯ ಸದಸ್ಯರನ್ನು ಸಭೆಗೆ ಪರಿಚಯಿಸಿದರು. ಪ್ರೊ. ಸತ್ಯಜಿತ್ ಎಂ. ಸಹಾಯಕ ಎನ್.ಎಸ್.ಎಸ್. ಅಧಿಕಾರಿ ಇವರು ಎನ್.ಎಸ್.ಎಸ್. ಮತ್ತು ಯೂತ್ ರೆಡ್ ಕ್ರಾಸ್‌ನ ವಿದ್ಯಾರ್ಥಿ ಸಂಯೋಜಕರುಗಳನ್ನು ಸಭೆಗೆ ಪರಿಚಯಿಸಿದರು.
ಪ್ರೊ. ಸುರೇಶ್ ವಿ. ಎನ್.ಎಸ್.ಎಸ್. ಮತ್ತು ಯೂತ್ ರೆಡ್ ಕ್ರಾಸ್‌ನ ಘಟಕಾಧಿಕಾರಿ ಇವರು ೨೦೧೭-೧೮ ನೇ ಸಾಲಿನ ಎನ್.ಎಸ್.ಎಸ್. ಮತ್ತು ಯೂತ್ ರೆಡ್ ಕ್ರಾಸ್‌ನ ವರದಿಯನ್ನು ಸಭೆಗೆ ಮಂಡಿಸಿದರು. ಶ್ರೀ ಆದಿತ್ಯಕೇಶವ ಮತ್ತು ಸಂಗಡಿಗರು ಎನ್.ಎಸ್.ಎಸ್. ಗೀತೆಯನ್ನು ಹಾಡಿದರು. ಶ್ರೀ ಚಂದ್ರಕಿರಣ್ ಇವರು ಎನ್.ಎಸ್.ಎಸ್. ಪ್ರಮಾಣ ವಚನವನ್ನು ಸ್ವಯಂಸೇವಕರಿಗೆ ಬೋದಿಸಿದರು. ಶ್ರೀ ನವೀನ್ ಇವರು ಎನ್.ಎಸ್.ಎಸ್. ಚಪ್ಪಾಳೆಯನ್ನು ಸಭೆಗೆ ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಎ. ಜ್ಞಾನೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಅರ್ಜುನ್ ರಾಜ್ ಇವರು ಧನ್ಯವಾದ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಪ್ರೊಫೆಸರ್ ಕೆ.ವಿ. ದೇವದಾಸ್, ಕೆ.ವಿ.ಜಿ. ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಬೊಳ್ಳೂರು ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಮತ್ತು ಎಲ್ಲಾ ಸ್ವಯಂ ಸೇವಕರು ಭಾಗವಹಿಸಿದ್ದರು. ಕು. ಸಿಂಚನಾ ಮತ್ತು ಕು. ಮಯೂರಿ ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.