ಕಾಂಞಂಗಾಡ್-ಸುಳ್ಯ-ಕಾಣಿಯೂರು ರೈಲು ಮಾರ್ಗ -೧೫ ದಿನದೊಳಗೆ ಸಿ.ಎಂ. ಭೇಟಿಗೆ ಸುಳ್ಯದಿಂದ ನಿಯೋಗ

Advt_Headding_Middle
Advt_Headding_Middle

ಕಾಂಞಂಗಾಡ್-ಸುಳ್ಯ-ಕಾಣಿಯೂರು ರೈಲು ಮಾರ್ಗ ಕುರಿತು ಚರ್ಚಿಸಲು ಅ.೧೫ರಂದು ಸುಳ್ಯ ನ.ಪಂ.ನಲ್ಲಿ ಕಾಂಞಂಗಾಡ್-ಕಾಣಿಯೂರು ರೈಲ್ವೇ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಸಭೆ ನಡೆದು, ೧೫ ದಿನಗಳೊಳಗೆ ರಾಜ್ಯದ ಮುಖ್ಯಮಂತ್ರಿಯವರನ್ನು ಭೇಟಿಯಾಗುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಕಾಂಞಂಗಾಡ್-ಕಾಣಿಯೂರು ರೈಲ್ವೆ ಕ್ರಿಯಾ ಸಮಿತಿಯ ಸಮಚಾಲಕ ಸೂರ್ಯನಾರಾಯಣ ಭಟ್, ಪ್ರಮುಖರಾದ ಯೂಸುಫ್ ಹಾಜಿ, ಕುಂಞಿಕಣ್ಣನ್, ರತ್ನಾಕರ್ ಹಾಗು ಸುಳ್ಯದವರಾದ ಪಿ.ಬಿ.ಸುಧಾಕರ ರೈ, ಶ್ರೀರಾಮ ಪಾಟಾಜೆ, ತಾಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ, ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸದಸ್ಯರುಗಳಾದ ಎನ್.ಎ.ರಾಮಚಂದ್ರ, ಗೋಪಾಲ ನಡುಬೈಲು, ಜಿ.ಪಂ.ಸದಸ್ಯರುಗಳಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಮಾಜಿ ಜಿ.ಪಂ.ಸದಸ್ಯೆ ಭಾಗೀರಥಿ ಮುರುಳ್ಯ, ಸುರೇಶ್ ಕಣೆಮರಡ್ಕ, ಮಹೇಶ್ ರೈ ಮೇನಾಲ, ಶಾಂತರಾಮ ಕಣಿಲೆಗುಂಡಿ, ಚಂದ್ರಶೇಖರ ಪನ್ನೆ ಸಭೆಯಲ್ಲಿದ್ದರು.
ಸಭೆಯಲ್ಲಿ ಮಾತನಾಡಿದ ಕಾಂಞಂಗಾಡ್-ಕಾಣಿಯೂರು ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿ, ಸುಳ್ಯದ ಪಿ.ಬಿ. ಸುಧಾಕರ ರೈಯವರು, “ಈ ಭಾಗದಲ್ಲಿ ರೈಲು ಹಾದು ಹೋಗಬೇಕೆನ್ನುವುದು ನಮ್ಮೆಲ್ಲರ ಆಸೆ. ಇದಕ್ಕಾಗಿ ಹಲವು ಸಭೆಗಳಾಗಿವೆ. ಸಮಿತಿಗಳು ರಚನೆಯಾಗಿದೆ. ಸರಕಾರಗಳಿಗೆ ಮನವಿಯನ್ನು ಮಾಡಿಕೊಂಡಿzವೆ. ಆದರೆ ಇದುವರೆಗೆ ಅದು ಅಂತಿಮವಾಗಿಲ್ಲ. ಕಾಂಞಂಗಾಡ್-ಕಾಣಿಯೂರು ಇದು ಕೇರಳ ಮತ್ತು ಕರ್ನಾಟಕದ ಭಾಗವಾಗಿದ್ದು, ಕೇರಳ ಸರಕಾರವನ್ನು ಮನವೊಲಿಸಿ ಒಪ್ಪಿಗೆ ಕೊಡಿಸುವ ಕೆಲಸ ಅಲ್ಲಿಯವರು ಮಾಡಿದ್ದಾರೆ. ಇನ್ನು ನಮ್ಮ ಸರಕಾರವನ್ನು ಒಪ್ಪಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಬಳಿಕ ಕೇರಳದ ರೈಲ್ವೆ ಕ್ರಿಯಾ ಸಮಿತಿಯ ಸೂರ್ಯನಾರಾಯಣ ಭಟ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಈ ಕೆಲಸ ಆಗಬೇಕಾಗಿದೆ. ಇದರ ೫೦ ಶೇಖಡ ಖರ್ಚು ಕೇಂದ್ರ ಸರಕಾರ ಭರಿಸಿದರೆ ಉಳಿದ ಅರ್ಧ ರಾಜ್ಯ ಸರಕಾ ಭರಿಸಬೇಕು. ಈಗಾಗಲೇ ನಮ್ಮ ಕೇರಳ ಸರಕಾರ ಒಪ್ಪಿಗೆ ನೀಡಿದ್ದು ಮೊದಲ ಹಂತವಾಗಿ ೩೨೫ ಕೋಟಿ ರೂ ನೀಡಿದೆ. ಇನ್ನೂ ಕರ್ನಾಟಕ ಸರಕಾರದ ತಾಂತ್ರಿಕ ಒಪ್ಪಿಗೆ ದೊರೆಯಬೇಕು“ ಎಂದು ಹೇಳಿದರು. ಬಳಿಕ ಚರ್ಚೆ ನಡೆದು ೧೫ ದಿನಗಳೊಳಗೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಶಾಸಕ ಅಂಗಾರರ ನೇತೃತ್ವದಲ್ಲಿ ಭೇಟಿಯಾಗುವ ಕುರಿತು ನಿರ್ಧರಿಸಲಾಯಿತು. ಜತೆಗೆ ಜಿಲ್ಲೆಯ ಉಸ್ತುವಾರಿ ಸಚಿವರು, ಎಂ.ಪಿ.ಯವರು, ಪುತ್ತೂರು ಶಾಸಕರು, ವಿರಾಜಪೇಟೆ ಶಾಸಕರು, ಸುಳ್ಯ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರಿದ್ದು ಸುಳ್ಯದಿಂದ ನಿಯೋಗ ಹೋಗುವುದೆಂದು ನಿರ್ಣಯ ಕೈಗೊಳ್ಳಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.