ದೇವರಗುಂಡ ಮುರೂರು ಶ್ರೀಕೃಷ್ಣ ಭಜನಾ ಮಂದಿರದ ವತಿಯಿಂದ ಕೊಡಗು ನೆರೆ ಸಂತ್ರಸ್ತರಿಗೆ ಧನಸಹಾಯ

Advt_Headding_Middle
Advt_Headding_Middle

ದೇವರಗುಂಡ ಮುರೂರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರುಕುಡಿಕೆ ಮತ್ತು ಆಟೋಟ ಸ್ಪರ್ಧೆಗಳನ್ನು ಮೊಟಕುಗೊಳಿಸಿ ಸಂಗ್ರಹವಾದ ಹಣದ ಮೊತ್ತವನ್ನು ಕೊಡಗು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಆಡಳಿತ ಮಂಡಳಿಯವರು ತೀರ್ಮಾನಿಸಿರುತ್ತಾರೆ. ಅದರಂತೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಪೂರ್ಣವಾಗಿ ಮನೆ, ಆಸ್ತಿಯನ್ನು ಕಳೆದುಕೊಂಡ ಒಂದು ಕುಟುಮಬವನ್ನು ಆಯ್ಕೆ ಮಾಡಿ ಅ. ೧೪ರಮದು ರೂ. ೨೫,೦೦೦ ವನ್ನು ಮಡಿಕೇರಿಯ ಕಾಲೂರು ಗ್ರಾಮದ ಮಂಞನ ಮನೆ ತಮ್ಮಯ್ಯರವರಿಗೆ ನೀಡಲಾಯಿತು.


ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಚಾಲಚಂದ್ರ ದೇವರಗುಂಡ, ಆಡಳಿತ ಮಂಡಳಿಯ ಅಧ್ಯಕ್ಷರಾದ ನಾಗೇಶ್ ದೇವರಗುಂಡ, ಕಾರ್ಯದರ್ಶಿ ಹರಿಪ್ರಸಾದ್ ದೇವರಗುಂಡ, ನವಿನ ಡಿ.ಎಸ್., ಚಂದ್ರಜಿತ್ ಮಾವಂಜಿ, ಪುತ್ತು ಮಾಸ್ತರ್, ಕಮಲಾಕ್ಷ ವಾಗ್ಲೆ, ಪ್ರಖ್ಯಾತ್ ವಾಗ್ಲೆ, ಯಶವಂತ ಡಿ.ಕೆ., ಕೃಷ್ಣ ಮುರೂರು, ಚಂದ್ರಶೇಖರ ಮುರೂರು, ಶಿವಪ್ರಸಾದ್ ಡಿ.ಎಸ್.ರಾಜೇಶ್ ಡಿ., ಲೋಕೇಶ್ ಡಿ., ಹೊನ್ನಪ್ಪ ಗೌಡ, ಸುದರ್ಶನ ಮುರೂರು, ಕುಶಾಲಪ್ಪ ಪಿ.ಕೆ. ಹಾಗೂ ಮಂಞನ ಗವಡರ ಪತ್ನಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.