Breaking News

ಸಾಮಾನ್ಯನಲ್ಲಿ ಸಾಮಾನ್ಯವಾಗಿ ಬೆಳೆದು ವಿಶ್ವದಲ್ಲಿ ಗುರುತಿಸಿ ಸರ್ವರಿಗೂ ಮಾದರಿಯಾದ ಮಹಾನ್ ವ್ಯಕ್ತಿ ಮಹಾತ್ಮಾಗಾಂಧಿ – ಡಾ| ಸುಂದರ್ ಕೇನಾಜೆ

Advt_Headding_Middle
Advt_Headding_Middle

 

ಗಾಂಧಿ ಚಿಂತನೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ತಮ್ಮ ಜೀವನದ ಉದ್ದಕ್ಕೂ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನೀಡುವ ಗೌರವವಾಗಿರುತ್ತದೆ. ಸತ್ಯ ಅಹಿಂಸೆ ಸಮಾನತೆಗಳನ್ನು ಇಷ್ಟಪಡದವನಿಗೆ ಗಾಂಧಿನಯನ್ನು ಇಷ್ಟಪಡಲು ಸಾಧ್ಯವಿಲ್ಲ. ಗಾಂಧಿ ಕಂಡ ಹಿಂದೂಯಿಸನ್‌ನಲ್ಲಿ ಈ ದೇಶದ ಹಿಂದು, ದಲಿತರು, ಮುಸ್ಲಿಮ್ ಕ್ರೈಸ್ತರು ಹಾಗೂ ಎಲ್ಲಾ ಜಾತಿ ಜನಾಂಗದ ಜನರು ಇದ್ದರು. ಆದರೆ ಇತ್ತೀಚಿಗೆ ಗಾಂಧಿಯನ್ನು ಕೊಂದ ಗೋಡ್ಸೆಯ ಕೊಲ್ಲುವ ಸಿದ್ಧಾಂತ ಮೇಳೈಸುತ್ತಿದೆ. ಇದೆ ನಮ್ಮ ದೊಡ್ಡ ದುರಂತ ಗಾಂಧಿಯ ಚಿಂತನೆಗಳು ಇಂದಿಗೂ ಪ್ರಸ್ತುತ ಗಾಂಧಿಯ ನಿಲುವುಗಳು ನಮಗೂ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಗಾಂಧಿ ಚಿಂತನೆ ಎಂಬ ಬಗ್ಗೆ ರೋಟರಿ ಸಭೆಯಲ್ಲಿ ಮಾತನಾಡುತ್ತಾ ಡಾ| ಸುಂದರ ಕೇನಾಜೆ ವಿಷಯ ಮಂಡನೆ ಮಾಡಿದರು.


ಸಭೆಯ ಅಧ್ಯಕ್ಷತೆಯನ್ನು ರೋಟರಿ ಸುಳ್ಯ ಅಧ್ಯಕ್ಷ ರೊ. ದಯಾನಂದ ಆಳ್ವ ವಹಿಸಿದ್ದರು. ಕಾರ್ಯದರ್ಶಿ ದೊ. ಡಾ. ಗುರುರಾಜ್ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ರೊ. ಜಿತೇಂದ್ರ, ರೊ. ಡಾ. ಪುರುಷೋತ್ತಮ ಉಪಸ್ಥಿತರಿದ್ದರು. ಅತಿಥಿಗಳನ್ನು ರೊ. ಲತಾಮಧುಸೂಧನ್ ಸಭೆಗೆ ಪರಿಚಯಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.