ದುಗಲಡ್ಕ ದುಗ್ಗಲಾಯ ದೈವಸ್ಥಾನದಲ್ಲಿ ದುರ್ಗಾಪೂಜೆ ಮತ್ತು ಆಯುಧಪೂಜೆ

Advt_Headding_Middle
Advt_Headding_Middle

ದುಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಅ 17 ರಂದು ನವರಾತ್ರಿಯ ದುರ್ಗಾಷ್ಟಮಿ ದಿನ ದುರ್ಗಾಪೂಜೆ ಮತ್ತು ಆಯುಧ ಪೂಜೆ ನಡೆಯಿತು.

ಬೆಳಿಗ್ಗೆ ದುರ್ಗಾಪೂಜೆ ಆರಂಭಗೊಂಡು, ನಂತರ ಆಯುಧ ಪೂಜೆ ನಡೆಯಿತು. ಹಲವಾರು ಮಂದಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಯಾನಂದ ಸಾಲ್ಯಾನ್ ಮೂಡೆಕಲ್ಲು ಹಾಗೂ ಸದಸ್ಯರು, ಆಡಳಿತ ಮೊಕ್ತೇಸರ ರಾಘವೇಂದ್ರ ಭಟ್ ಕಲ್ದಂಬೆ, ದುಗ್ಗಲಾಯ ಯುವ ಸೇವಾ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.