ವಿನೋಬನಗರ ವಿವೇಕಾನಂದ ವಿದ್ಯಾ ಸಂಸ್ಥೆಯ ಸಭಾ ಭವನದ ಭೂಮಿ ಪೂಜೆ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮದ ವಿನೋಬನಗರ ವಿವೇಕಾನಂದ ವಿದ್ಯಾ ಸಂಸ್ಥೆಯು ರಜತ ಮಹೋತ್ಸವದ ಸಂಭ್ರಮದ ಹೊಸ್ತಿಲಲ್ಲಿದ್ದು ಅದರ ಸವಿನೆನಪಿಗಾಗಿ ಸುಮಾರು ೨೮ ಲಕ್ಷ ವೆಚ್ಚದಲ್ಲಿ ೭೦೦ ಜನ ಆಸೀನರಾಗುವ ಸಭಾ ಭವನಕ್ಕೆ ಭೂಮಿ ಪೂಜೆಯನ್ನು ಅ.೧೯ರಂದು ವಿಜಯ ದಶಮಿಯ ದಿನ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಶ್ರೀಮತಿ ಪದ್ಮಾವತಿ ಉಪೇಂದ್ರ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಭೂಮಿ ಪೂಜೆಯನ್ನು ಶಾಲಾ ಸ್ಥಾಪಕ ಅಧ್ಯಕ್ಷ ಉಪೇಂದ್ರ ಕಾಮತ್ ನೆರವೇರಿಸಿದರು. ಇವರ ಜೊತೆಗೆ ಬೆಳ್ಳಿ ಹಬ್ಬದ ಸ್ವಾಗತ ಸಮಿತಿಯ ಅಧ್ಯಕ್ಷ ಮಧುಸೂದನ್ ಸುಳ್ಯ, ಎ.ಪಿ.ಎಂ.ಸಿ. ಅಧ್ಯಕ್ಷ ದೇರಣ್ಣ ಗೌಡ ಅಡ್ಯಂತಡ್ಕ, ಅರಂಬೂರು ಪ್ಲೈವುಡ್ ಮಾಲಿಕರಾದ ಕೃಷ್ಣ ಕಾಮತ್, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ರಾಷ್ಟ್ರೋತ್ಥಾನ ಶಿಶು ಮಂದಿರದ ಅಧ್ಯಕ್ಷ ಶಿವಪ್ರಸಾದ್ ಮಂಡೆಕೋಲು, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆಮನಬಳ್ಳಿ, ಮಾಜಿ ಜಿ.ಪಂ. ಸದಸ್ಯ ನವೀನ್ ರೈ ಮೇನಾಲ, ವಿದ್ಯಾ ಸಂಸ್ಥೆಯ ಸಂಚಾಲಕ ಸುಧಾಕರ್ ಕಾಮತ್, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಗೋಪಾಲಕೃಷ್ಣ ಕಾಟೂರು, ಜಯರಾಮ ರೈ ಜಾಲ್ಸೂರು, ವಿಶ್ವನಾಥ್ ಕಲ್ಲಡ್ಕ, ಹೇಮಂತ್ ಕಾಮತ್, ಜಯರಾಜ್ ಕುಕ್ಕೇಟಿ, ನಾರಾಯಣ ಭಟ್ ಗಬ್ಬಲಡ್ಕ, ಆತ್ಮನಂದ ಗಬ್ಬಲಡ್ಕ, ಶ್ರೀಮತಿ ಕಸ್ತೂರಿ ವಿನೋಬಾನಗರ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎನ್. ಗೋಪಾಲ್‌ರಾವ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ, ಶಾಲಾ ಪೋಷಕ ವೃಂದ, ವಿದ್ಯಾರ್ಥಿ ವೃಂದ, ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘ ಎಲ್ಲಾ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.