ಕೇರ್ಪಡ ನವರಾತ್ರಿ ಉತ್ಸವ ಧಾರ್ಮಿಕ ಸಭೆ-ಇಬ್ಬರಿಗೆ ಸನ್ಮಾನ

Advt_Headding_Middle
Advt_Headding_Middle

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ೧೦ ದಿವಸದ ನವರಾತ್ರಿ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆ ನಡೆಯಿತು. ಪುತ್ತೂರು ವಿವೇಕಾನಂದ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಪ್ರೋ. ವೇದವ್ಯಾಸರವರು ಧಾರ್ಮಿಕ ಉಪನ್ಯಾಸ ನೀಡಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಕ್ಷಯ ಪಿ.ಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು. ಈ ವೇಳೆ ಇಬ್ಬರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು. ಪ್ರವಾಸೋಧ್ಯಮ ಇಲಾಖೆಯ ಮೂಲಕ ಅನುದಾನ ಒದಗಿಸಲು ಸಹಕರಿಸಿದ ಕುಕ್ಕೆ ಸುಬ್ರಮ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆಯರಾದ ರಾಜೀವಿ ಆರ್ ರೈಯವರನ್ನು ಮತ್ತು ಎಡಮಂಗಲದ ದೋಣಿ ಮನೆ ಡಾ.ಅವಿನ್ ಡಿ.ಪಿಯವರನ್ನು ಸನ್ಮಾನಿಸಲಾಯಿತು. ಮಂಗಳೂರು ಕೊಡಿಯಾಲಬೈಲ್ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟೃಸ್ಟ್‌ನ ಪ್ರಧಾನ ವ್ಯವಸ್ಥಾಪಕರಾದ ಶ್ರಿಮತಿ ಪೂರ್ಣಿಮಾ ಆರ್ ಶೆಟ್ಟಿ, ನಿವೃತ್ತ ಅಧ್ಯಾಪಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಿಲ್ಕ್ ಮಾಸ್ಟರ್ ರಾಘವ ಗೌಡ ಪಲ್ಲತಡ್ಕ ಮುಖ್ಯ ಅಥಿತಿಯಾಗಿ ವೇದಿಕೆಯಲ್ಲಿದ್ದರು. ನಿವೃತ್ತ ಅಧ್ಯಾಪಕ ನಾರಾಯಣ ಭಟ್ ಕುರಿಯ ನರ್ಲಡ್ಕರವರು ಕಾರ್ಯಕ್ರಮ ನಿರೂಪಿಸಿ, ಸನ್ಮಾನಿತರನ್ನು ಪರಿಚಯಿಸಿದರು. ದೇವಳದ ಉಪಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿಯವರು ನವರಾತ್ರಿ ಉತ್ಸವ ನಡೆದು ಬಂದ ವಿವರವನ್ನು ಪ್ರಾಸ್ಥಾವನೆಗೈದರು .ಆಡಳಿತ ಸಮಿತಿ ಸದಸ್ಯ ನವೀನ್ ಕುಮಾರ್ ಬೊಳ್ಕಜೆ ವಂದಿಸಿದರು. ಅಮೃತ, ಅಕ್ಷಯ್ ಆಳ್ವ ಮತ್ತು ಶೃತಿ ಕೇರ್ಪಡ ಪ್ರಾರ್ಥಿಸಿದರು. ಆಡಳಿತ ಸಮಿತಿ ಸದಸ್ಯೆ ದೇವಿ ರೈ ಮಮತ ಜಗನ್ನಾಧ ಪೂಜಾರಿ, ಮುಕ್ಕೂರು ನಾಗೇಶ ನೂಜಾಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.