Breaking News

ಪಂಜಿಕಲ್ಲು: ತೂಗುಸೇತುವೆ ಮೇಲಿಂದ ನೀರಿಗೆ ಬಿದ್ದ ಪ್ರವಾಸಿಗರ ಅಫೆ ರಿಕ್ಷಾ ಕೀಯನ್ನು ನೀರಿನಲ್ಲಿ ಈಜಿ ಹುಡುಕಿಕೊಟ್ಟ ಅಬೂತಾಹಿರ್ ಮೈತಡ್ಕ

Advt_Headding_Middle
Advt_Headding_Middle

ಜಾಲ್ಸೂರು ಸಮೀಪದ ಪಂಜಿಕಲ್ಲು ತೂಗುಸೇತುವೆಯ ಮೇಲಿನಿಂದ ಪಯಸ್ವಿನಿ ನದಿಗೆ ಬಿದ್ದ ಅಫೆ ರಿಕ್ಷಾದ ಕೀಯನ್ನು ಸ್ಥಳೀಯರಾದ ಅಬೂತಾಹಿರ್ ಮೈತಡ್ಕ ಎಂಬವರು ನೀರಿನಲ್ಲಿ ಈಜಿ ಹುಡುಕಿಕೊಟ್ಟ ಘಟನೆ ಅ.೧೪ರಂದು ಸಂಜೆ ಸಂಭವಿಸಿದೆ.


ಉಳ್ಳಾಳ ಸಮೀಪದ ನೇರಳಕಟ್ಟೆ ಎಂಬಲ್ಲಿಂದ ಅಫೆ ರಿಕ್ಷಾದಲ್ಲಿ ಅ.೧೪ರಂದು ಸಂಜೆ ಪ್ರವಾಸಕ್ಕೆಂದು ಬಂದಿದ್ದ ೧೨ ಜನರ ತಂಡ ಪಂಜಿಕಲ್ಲು ತೂಗುಸೇತುವೆಯ ಬಳಿ ವಾಹನ ನಿಲ್ಲಿಸಿ ತೂಗುಸೇತುವೆಯ ಮೇಲೆ ತೆರಳಿದ್ದರು. ಈ ಸಂದರ್ಭದಲ್ಲಿ ಚಾಲಕನ ಕೈಯಲ್ಲಿದ್ದ ಕೀ ಕೈಜಾರಿ ತೂಗುಸೇತುವೆಯ ಮೇಲಿನಿಂದ ಕೆಳಗೆ ನೀರಿಗೆ ಬಿತ್ತು. ಇದನ್ನು ಗಮನಿಸಿದ ಸ್ಥಳದಲ್ಕಿದ್ದ ಅಬುತಾಹಿರ್ ಮೈತಡ್ಕ ಎಂಬವರು ನೀರಿಗೆ ಇಳಿದು ಈಜಿ ಕೀ ಬಿದ್ದ ಸ್ಥಳದಲ್ಲಿ ಹುಡುಕಾಡಿ ಕೀಯನ್ನು ಚಾಲಕನಿಗೆ ನೀಡಿ ಸಹಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.