Breaking News

ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Advt_Headding_Middle
Advt_Headding_Middle

ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ. 1೦ರಿಂದ ಪ್ರಾರಂಭಗೊಂಡು, 19 ರಂದು ಸಮಾಪ್ತಿಗೊಂಡಿತು.

 

ಪ್ರತಿದಿನ ಶ್ರೀ ದೇವರಿಗೆ ಮಹಾಪೂಜೆ, ದೀಪಾರಾಧನೆ, ದುರ್ಗಾಪೂಜೆ, ಅಕ್ಷರಭ್ಯಾಸ, ವಾಹನಗಳಿಗೆ ಆಯುಧಪೂಜೆ, ವರದಾಯಿನಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಕಾಯರ್ತೋಡಿ, ಮೇನಾಲ ಶ್ರೀ ಕೃಷ್ಣ ಭಜನಾ ಮಂಡಳಿ, ಸತ್ಯಸಾಯಿ ಭಜನಾ ಮಂಡಳಿ ಚೊಕ್ಕಾಡಿ, ಶ್ರೀ ಮಾತಾ ಭಜನ ತಂಡ ಶಾಂತಿನಗರ, ಶಾಸ್ತಾವೇಶ್ವರ ಭಜನಾ ಸಮಿತಿ ನಾಗಪಟ್ಟಣ, ಮಹಾವಿಷ್ಣು ಭಜನಾ ಮಂಡಳಿ ಕಾಯರ್ತೋಡಿ, ದೀಪಾಂಜಲಿ ಭಜನಾ ಮಂಡಳಿ ಶಾಂತಿನಗರ, ಮಂಜುನಾಥೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ, ವಿವೇಕ ಜಾಗೃತ ಬಳಗ ಸುಳ್ಯ, ಮೂಕಾಂಬಿಕ ಭಜನಾ ಮಂಡಳಿ ಅರಂಬೂರು, ಸದಾಶಿವ ಭಜನಾ ಮಂಡಳಿ ಆಲೆಟ್ಟಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ದೇವಸ್ಥಾನದಲ್ಲಿ ಈಗಾಗಲೇ ೩ ವರ್ಷದ ಅವಧಿಗೆ ಉತ್ಸವ ಸಮಿತಿಯನ್ನು ರಚಿಸಿ ಸುಮಾರು ೬ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಆಗಿರುತ್ತದೆ. ಇದರ ಅಧ್ಯಕ್ಷರಾಗಿ ಚಂದ್ರಶೇಖರ ಅಡ್ಪಂಗಾಯ, ಕಾರ್ಯದರ್ಶಿಯಾಗಿ ಜಿನ್ನಪಪ್ಪ ಪೂಜಾರಿಯವರು ಆಯ್ಕೆಗೊಂಡಿರುತ್ತಾರೆ.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಡಿ.ಎಸ್.ಶೇಷಪ್ಪ, ಡಿ.ಎಸ್.ಕುಶಾಲಪ್ಪ, ಡಿ.ಎಸ್.ಗಿರೀಶ್, ಡಿ.ಎಸ್.ವಿದ್ಯಾಧರ, ಡಿ.ಎಸ್.ಯಶವಂತ, ಡಿ.ಎಸ್.ಇಂದಿರಾ ಮತ್ತು ಮನೆಯವರು ವಾಸುದೇವ ಕಾಯರ್ತೋಡಿ, ಲೀಲಾವತ ವಾಸುದೇವ, ಮುದ್ದು ಮೀನಾಕ್ಷಿ, ಶ್ರೀಮತಿ ನವ್ಯಾ ಚಂದ್ರಶೇಖರ, ಸುಮತಿ ಆಚಾರ್ಯ ಕಾಯರ್ತೋಡಿ, ಯಶೋಧಾ ವಿಶ್ವನಾಥ, ಚಂದಮ್ಮ, ಶಾಂಬವಿ, ರಘುನಾಥ ರೈ ಕಾಯರ್ತೋಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡರು. ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ಬ್ಯಾಂಡ್ ಸೆಟನ್ನು ಕೊಡುಗೆಯಾಗಿ ಚಕ್ರಪಾಣಿ ವಾಗ್ಲೆ ಕೊಡಿಯಾಲಬೈಲು, ಎ.ಇ.ಮಣಿಕಂಠನ್, ಮೈತಾಲಿಯವರು ಕೊಡುಗೆಯಾಗಿ ನೀಡಿದರು. ದಿನಂಪ್ರತಿ ರಾತ್ರಿ ದಾನಿಗಳಿಂದ ಅನ್ನಪ್ರಸಾದ ಕಾರ್ಯಕ್ರಮವು ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.