ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Advt_Headding_Middle
Advt_Headding_Middle

ಐವರ್ನಾಡು ಶ್ರಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ಅ.1೦ ರಿಂದ.19 ರವರೆಗೆ ನವರಾತ್ರಿ ಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಪ್ರತೀ ದಿನ ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.ಅ.18 ರಂದು ಆಯುಧ ಪೂಜೆ ನಡೆಯಿತು. ಅ.19  ರಂದು ವಿಜಯದಶಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಪ್ರತೀ ದಿನ ರಾತ್ರಿ ದುರ್ಗಾಪೂಜೆ ನಡೆಯಿತು. ಅ.19  ರಂದು ಬೆಳಿಗ್ಗೆ ದೇವಸ್ಥಾನದಲ್ಲಿ 2019  ಫೆಬ್ರವರಿ 5 ರಿಂದ ಫೆ.11ರವರೆಗೆ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವತಯಾರಿ ಬಗ್ಗೆ ಬ್ರಹ್ಮಕಲಶೋತ್ಸವ ಸಮಿತಿ,ವ್ಯವಸ್ಥಾಪನಾ ಸಮಿತಿ,ಬೈಲುವಾರು ಸಮಿತಿ ಹಾಗೂ ಭಕ್ತಾದಿಗಳ ಸಭೆಯು ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಸ್.ಎನ್.ಮನ್ಮಥ,ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣಪಯ್ಯ ಭಟ್ ಪಾಲೆಪ್ಪಾಡಿ, ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ,ಕೋಶಾಧಿಕಾರಿ ಬೆಳ್ಯಪ್ಪ ಗೌಡ ದೇರಾಜೆ,ಪ್ರಧಾನ ಕಾರ್ಯದರ್ಶಿ ಮಾಧವ ಭಟ್ ಶೃಂಗೇರಿ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರ್ಚಕ ಪದ್ಮನಾಭ ಭಟ್, ಶಿವರಾಮ ಗೌಡ ನೆಕ್ರೆಪ್ಪಾಡಿ,ಜನಾರ್ಧನ ಗೌಡ ಕೊಪ್ಪಳ,ಕುಶಾಲಪ್ಪ ಗೌಡ ಮಡ್ತಿಲ,ರಾಮಣ್ಣ ನಾಯ್ಕ ಉದ್ದಂಪಾಡಿ, ರಾಜೇಶ್ ಭಟ್ ಬಾಂಜಿಕೋಡಿ,ಪದ್ಮಾವತಿ ಮಡ್ತಿಲ,ಸುಗಂಧಿನಿ ಚೆಮ್ನೂರು ಮತ್ತು ಗ್ರಾಮದ ನೂರಾರು ಜನ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.